ಬೆಂಗಳೂರು: ಕ್ಷಣಾರ್ಧದಲ್ಲಿ ಮಾಯವಾದ ಆಟೋ - ಮಾನಸಿಕ ಅಸ್ವಸ್ಥೆ
ಪೆಟ್ರೋಲ್ ಬಂಕ್ ಮುಂದೆ ನಿಲ್ಲಿಸಿದ್ದ ಆಟೋವನ್ನು ಕ್ಷಣಾರ್ಧದಲ್ಲಿ ಮಂಗಳಮುಖಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಾಯಂಡಹಳ್ಳಿ ಬಳಿಯ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ತಿಂಗಳು 16ರಂದು ನಾಯಂಡಹಳ್ಳಿ ಬಳಿಯ ಪೆಟ್ರೋಲ್ ಬಂಕ್ ಮುಂದೆ ಆಟೋ ನಿಲ್ಲಿಸಿದ ಚಾಲಕ ಡಿಎಲ್ ಸಂಗ್ರಹಿಸಲು ಬಂಕ್ಗೆ ಹೋಗಿದ್ದಾನೆ. ಇದೇ ವೇಳೆ, ಬರುತ್ತಿದ್ದ ಮಾನಸಿಕ ಅಸ್ವಸ್ಥೆ ಮೇರಿ ಎಂಬ ಮಂಗಳಮುಖಿ ಆಟೋದಲ್ಲಿ ಕೀ ಇರುವುದನ್ನು ಕಂಡು ಆಟೋವನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾಳೆ. ಬಳಿಕ ಸುಮನಹಳ್ಳಿ ಬಳಿ ಕಾರ್ಗೆ ಗುದ್ದಿ ಪುನಃ ಪರಾರಿಯಾಗಿದ್ದಾಳೆ. ಈ ಪ್ರಕರಣವನ್ನು ಪರಿಶೀಲಿಸಿದ ಪೊಲೀಸರು ಆಟೋ ಓಡಿಸಿಕೊಂಡು ಪರಾರಿಯಾದ ಮಂಗಳಮುಖಿಯು ಮಾನಸಿಕ ಅಸ್ವಸ್ಥೆಯಾಗಿದ್ದಳು ಎಂದು ಕಂಡುಕೊಂಡಿದ್ದಾರೆ. ಹೀಗಾಗಿ ಈ ಸಂಬಂಧ ಯಾವುದೇ ದೂರನ್ನು ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Last Updated : Feb 3, 2023, 8:33 PM IST