ಕರ್ನಾಟಕ

karnataka

ಕುಸಿದಿರುವ ಮೇಲ್ಛಾವಣಿ

ETV Bharat / videos

ಶಿಥಿಲಗೊಂಡಿದ್ದ ಜೈಲಿನ ಚಾವಣಿ ಕುಸಿದು ಪೊಲೀಸ್ ಪೇದೆ ಸಾವು - ವಿಡಿಯೋ - ಕಾನ್ಪುರ ದೇಹತ್ ನಿವಾಸಿ ಸೋನೆಲಾಲ್ ಬಂದಾ ಪೇದೆ

By

Published : Aug 8, 2023, 11:00 AM IST

ಬಂದಾ(ಉತ್ತರ ಪ್ರದೇಶ):ಶಿಥಿಲಗೊಂಡಿದ್ದ ಜೈಲಿನ ಚಾವಣಿ ಕುಸಿದು ಬಿದ್ದು ಓರ್ವ ಪೊಲೀಸ್ ಪೇದೆ ಮೃತಪಟ್ಟಿರುವ ಘಟನೆ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಘಟನೆ ಮಾಹಿತಿ ಮೇರೆಗೆ ಆಗಮಿಸಿದ ಎಸ್ಪಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣವೇ ಬೇರೆ ಪೊಲೀಸರು ಕೂಡ ಘಟನೆಯಿಂದ ಅವಶೇಷಗಳಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ  ಜೆಸಿಬಿಯಿಂದ ಕಾರ್ಯಾಚರಣೆ  ನಡೆಸಲಾಯಿತು. ಅದೃಷ್ಟವಶಾತ್​ ಬೇರೆ ಯಾವುದೇ ಪೊಲೀಸರಿಗೆ ಗಂಭೀರ ಹಾನಿಯಾಗಿಲ್ಲ.

ಕಾನ್ಪುರ ದೇಹತ್ ನಿವಾಸಿ ಸೋನೆಲಾಲ್ ಬಂದಾ ಪೇದೆ ಅವರನ್ನು ಜೈಲಿನಲ್ಲಿ ನಿಯೋಜಿಸಲಾಗಿತ್ತು. ಸೋಮವಾರ ಅವರು ಪೊಲೀಸ್​ ಲೈನ್​ 2 ಸಂಖ್ಯೆಯ ಜೈಲಿನ ವರಾಂಡದಲ್ಲಿ ಮಲಗಿದ್ದರು. ತಡರಾತ್ರಿ ಶಿಥಿಲಗೊಂಡ ಜೈಲಿನ ಚಾವಣಿ ಕುಸಿದಿದೆ. ಪರಿಣಾಮ  ಪೊಲೀಸ್ ಅಧಿಕಾರಿ ಸೋನೆಲಾಲ್ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಪಕ್ಕದ ಜೈಲಿನಲ್ಲಿ ಮಲಗಿದ್ದ ಪೊಲೀಸ್​ ಪೇದೆಯವರಿಗೆ  ಕುಸಿತದ ಶಬ್ದ ಕೇಳಿದ್ದು, ಆಗಲೇ ಆಗಮಿಸಿ ಪೊಲೀಸ್​​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  

4 ಜೆಸಿಬಿ ಯಂತ್ರಗಳ ಸಹಾಯದಿಂದ ಅವಶೇಷಗಳನ್ನು ತೆಗೆದು ಪೇದೆಯನ್ನು ಹುಡುಕಿದಾಗ ಅವರು ಅವಶೇಷಗಳಲ್ಲಿ ಹುದುಗಿ ಹೋಗಿದ್ದು ಕಂಡು ಬಂತು, ಬಳಿಕ ಅವರ ದೇಹವನ್ನು ಹೊರ ತೆಗೆಯಲಾಗಿಯಿತು. ತಕ್ಷಣವೇ ಬಂದಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಗಂಭೀರ ಗಾಯಗಳಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇನ್ನು ಘಟನೆಯಿಂದ ಗಾಯಗೊಂಡಿರುವ ಇತರರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಂದಾ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಆಕಾಶ್ ತಿಳಿಸಿದ್ದಾರೆ.  

ಇದನ್ನೂ ಓದಿ:ದೆಹಲಿ ಏಮ್ಸ್​ನ 2ನೇ ಮಹಡಿಯಲ್ಲಿ ಬೆಂಕಿ, ವೈದ್ಯಕೀಯ ಪರಿಕರಗಳು ಸುಟ್ಟು ಕರಕಲು: ವಿಡಿಯೋ ನೋಡಿ

ABOUT THE AUTHOR

...view details