ಬನಶಂಕರಿ ದೇವಿಗೆ 601 ಸೀರೆಗಳಿಂದ ವಿಶೇಷ ಅಲಂಕಾರ: ವಿಡಿಯೋ - ಈಟಿವಿ ಭಾರತ ಕನ್ನಡ ನ್ಯೂಸ್
ಬಾಗಲಕೋಟೆ: ನಾಡಿನ ಶಕ್ತಿಪೀಠಗಳಲ್ಲಿ ಒಂದಾದ ಬಾದಾಮಿಯ ಬನಶಂಕರಿ ದೇವಿಗೆ ನೇಕಾರರ ಸೀರೆಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ದೇವಿಯ ಸನ್ನಿಧಿ ಸೇರಿದಂತೆ ದೇವಾಲಯದ ಸುತ್ತಮುತ್ತಲೂ ಸೀರೆಗಳಿಂದ ಅಲಂಕಾರ ಮಾಡಲಾಗಿದೆ. ಸುಮಾರು 601 ಸೀರೆಗಳಿಂದ ಅಲಂಕಾರ ಮಾಡಲಾಗಿದ್ದು, ದೇವಾಂಗ ಸಮಾಜದ ಬಂಧುಗಳು ಈ ಅಲಂಕಾರ ಮಾಡಿ, ದೇವಿಗೆ ಹುಣ್ಣಿಮೆಯ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೂಲು ಹುಣ್ಣಿಮೆ ನಿಮಿತ್ತ ದೇವಿಗೆ ಅಲಂಕಾರ ಸಹಿತ ವಿಶೇಷ ಪೂಜೆಗಳು ನೆರವೇರಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ನೆರವೇರಿಸಿದರು. ಬೆಳಗಾವಿಯ ರಾಮದುರ್ಗದಿಂದ ಸೀರೆಗಳನ್ನು ಮೆರವಣಿಗೆ ಮೂಲಕ ಬಾದಾಮಿಯ ಬನಶಂಕರಿ ದೇವಾಲಯಕ್ಕೆ ತರಲಾಗಿದೆ.
Last Updated : Feb 3, 2023, 8:26 PM IST