ಕ್ಷೇತ್ರ ಮತ್ತು ಲೋಕ ಕಲ್ಯಾಣಕ್ಕಾಗಿ ಹೋಮ-ಹವನ ನಡೆಸಿದ ಬಾಲಚಂದ್ರ ಜಾರಕಿಹೊಳಿ - ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ:ಲೋಕ ಕಲ್ಯಾಣಕ್ಕಾಗಿ ಹಾಗೂ ಕ್ಷೇತ್ರದ ಜನರ ಏಳಿಗೆಗಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇಂದು ಬೆಳಗಿನ ಜಾವ ಇಲ್ಲಿನ ಇತಿಹಾಸ ಪ್ರಸಿದ್ಧ ಬಲಭೀಮ ದೇವಸ್ಥಾನದಲ್ಲಿ ಹೋಮ-ಹವನ ನಡೆಸಿದರು.ಅರಭಾವಿ ಕ್ಷೇತ್ರದ ಜನರಿಗೆ ಸದಾಕಾಲ ಒಳ್ಳೆಯದಾಗಬೇಕು. ಕಾಲ-ಕಾಲಕ್ಕೆ ಮಳೆ ಉತ್ತಮ ಬೆಳೆ ಬಂದರೆ ರೈತನ ಮೊಗದಲ್ಲಿ ಸಂತಸ ಮೂಡುತ್ತದೆ. ರೈತ ಚೆನ್ನಾಗಿದ್ದರೆ ಇಡೀ ದೇಶವೇ ಸುಖದಿಂದ ಇರುತ್ತದೆ ಎಂದು ನಾಲ್ವರು ಆಚಾರ್ಯರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಅರಭಾವಿ ಕ್ಷೇತ್ರ ಸೇರಿದಂತೆ ಇಡೀ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ, ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಅವರು, ಕ್ಷೇತ್ರದ ಜನರ ಸೇವೆ ಮಾಡಲು ಬಲಭೀಮ ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಸತ್ಯಾನ ಆಚಾರ್ಯ, ರಾಜು ಜೋಶಿ, ಹಣಮಂತ ಪೂಜೇರಿ, ಪುಟ್ಟಣ್ಣ ಪೂಜೇರಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಇದೇ ವೇಳೆ 25 ಅಡಿ ಎತ್ತರದ ಶ್ರೀ ರಾಮನ ನೂತನ ರಥಕ್ಕೆ ಬಾಲಚಂದ್ರ ಜಾರಕಿಹೊಳಿ ಪೂಜೆ ಸಲ್ಲಿಸಿದರು.