ಸಂಬಲ್ಪುರದಲ್ಲಿ ಪಾಳುಬಾವಿಗೆ ಬಿದ್ದ ಮರಿ ಆನೆ ರಕ್ಷಣೆ.. ವಿಡಿಯೋ - ಅರಣ್ಯ ಇಲಾಖೆ ಸಿಬ್ಬಂದಿ
ಸಂಬಲ್‌ಪುರ (ಒಡಿಶಾ) : ಇಲ್ಲಿನ ಸಂಬಲ್‌ಪುರದ ಜುಜುಮುರಾ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಬಸಿಯಪದ ಅರಣ್ಯದಲ್ಲಿನ ಪಾಳುಬಾವಿಗೆ ಬಿದ್ದಿದ್ದ ಮರಿ ಆನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಮಾಹಿತಿ ಪ್ರಕಾರ, ಭಾನುವಾರ ರಾತ್ರಿ ಕಾಡಿನಲ್ಲಿ ಸಾಗುತ್ತಿದ್ದಾಗ ಮರಿ ಆನೆ ಬಾವಿಗೆ ಬಿದ್ದಿದೆ. ನಂತರ ಆನೆಮರಿ ಬಾವಿಯಿಂದ ಹೊರ ಬರಲಾರದೆ ಜೋರಾಗಿ ಶಬ್ದ ಮಾಡಿದೆ. ಈ ವಿಷಯ ತಿಳಿದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಮೋದಿ ಮೆಚ್ಚುಗೆಗೆ ಬಂಡೀಪುರದಲ್ಲಿ ಸಂತಸ.. ಒದ್ದಾಡುತ್ತಿದ್ದ ಆನೆ ಉಳಿಸಿದ್ದೇ ಪವಾಡ
ರಾತ್ರಿಯಿಡೀ ತಾಯಿ ಆನೆ ಬಾವಿಯ ಬಳಿ ಕಾವಲು ಕಾಯುತ್ತಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯಲಿಲ್ಲ. ಸೋಮವಾರ ಬೆಳಗ್ಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ, ಮಳೆಯಿಂದಾಗಿ ಆನೆಯ ರಕ್ಷಣೆಗೆ ಸ್ವಲ್ಪ ಅಡಚಣೆಯಾಗಿತ್ತು. ಸತತ 3 ಗಂಟೆಗಳ ಕಾರ್ಯಾಚರಣೆಯ ನಂತರ ಆನೆ ಮರಿಯನ್ನು ಬಾವಿಯಿಂದ ರಕ್ಷಿಸಲಾಗಿದೆ.
ಇದನ್ನೂ ಓದಿ:ಮರಿ ರಕ್ಷಿಸಲು ಹೋಗಿ ತಾನೂ ಗುಂಡಿಗೆ ಬಿದ್ದ ತಾಯಿ ಆನೆ; ಹ್ಯಾಪಿ ಎಂಡಿಂಗ್ ವಿಡಿಯೋ ನೋಡಿ