ಕರ್ನಾಟಕ

karnataka

ಮುಖ, ಮೂಗು ಇಲ್ಲದ ಒಂದು ಕಣ್ಣಿನ ವಿಚಿತ್ರ ಮಗು ಜನನ - ವಿಡಿಯೋ

ETV Bharat / videos

ಮುಖ, ಮೂಗು ಇಲ್ಲದ ಒಂದು ಕಣ್ಣಿನ ವಿಚಿತ್ರ ಮಗು ಜನನ - ವಿಡಿಯೋ - ಈಟಿವಿ ಭಾರತ ಕನ್ನಡ

By

Published : Mar 15, 2023, 11:06 PM IST

ಮಯೂರ್‌ಭಂಜ್(ಒಡಿಶಾ): ವಿಚಿತ್ರ ಶಿಶುವೊಂದು ಹುಟ್ಟಿರುವ ಘಟನೆ ಇಲ್ಲಿನ ಮಯೂರ್‌ಭಂಜ್ ಜಿಲ್ಲೆಯ ರೈರಂಗ್‌ಪುರ ಸರಸಕಾನಾ ಎಂಬಲ್ಲಿ ನಡೆದಿದೆ. ಇನ್ನು, ಹುಟ್ಟಿದ ಮಗು ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಹುಟ್ಟಿದ ಮಗು ಸಂಪೂರ್ಣ ಅಸಹಜ ಸ್ಥಿತಿಯಲ್ಲಿತ್ತು. ಮಗುವಿನ ತಲೆಯ ಆಕಾರವು ವಿರೂಪಗೊಂಡಿದ್ದು, ಈ ಮಗುವು ಮೂಗು ಮತ್ತು ಮುಖವನ್ನು ಹೊಂದಿರಲಿಲ್ಲ. ಅದಲ್ಲದೇ ತಲೆಯ ಮೇಲ್ಭಾಗದಲ್ಲಿ ಕೇವಲ ಒಂದು ಕಣ್ಣು ಹೊಂದಿತ್ತು.

ಸ್ಥಳೀಯ ಮಹಿಳೆಯೊಬ್ಬರನ್ನು ಹೆರಿಗೆ ನೋವಿನ ಕಾರಣ ಆಂಬ್ಯುಲೆನ್ಸ್‌ನಲ್ಲಿ ಇಲ್ಲಿನ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ, ಮಹಿಳೆಯು ಆಸ್ಪತ್ರೆಗೆ ಸಾಗುವ ದಾರಿ ಮಧ್ಯೆ ಆಂಬ್ಯುಲೆನ್ಸ್‌ನಲ್ಲೇ ವಿಚಿತ್ರವಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ ಸಿಬ್ಬಂದಿ ಈ ಮಹಿಳೆಯನ್ನು ಇಲ್ಲಿನ ಬಂಗ್ರಿಪೋಶಿ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಮಗು ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದಾರೆ. ಸದ್ಯ ಮಹಿಳೆ ಆರೋಗ್ಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

 ಇದನ್ನೂ ಓದಿ :ಮಾರಮ್ಮ ಜಾತ್ರಾ ಮಹೋತ್ಸವ: 18 ಅಡಿ ಉದ್ಧದ ಸರಳುಗಳನ್ನು ಬಾಯಿಗೆ ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ

ABOUT THE AUTHOR

...view details