ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್‌ಗೆ ಗ್ರಾಮಸ್ಥರ ತರಾಟೆ- ವಿಡಿಯೋ - Gujaratkot village of Gurmatkal taluk
ಗುರುಮಠಕಲ್(ಯಾದಗಿರಿ):ವಿಧಾನ ಪರಿಷತ್ ಬಿಜೆಪಿ ಸದಸ್ಯ ಬಾಬುರಾವ್ ಚಿಂಚನಸೂರ್ಅವರನ್ನು ಜನರು ತರಾಟೆಗೆ ತೆಗೆದುಕೊಂಡ ಘಟನೆ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ನಡೆದಿದೆ. ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಚಿಂಚನಸೂರ್ ಗ್ರಾಮದ ನೀರಿನ ಸಮಸ್ಯೆ ಬಗೆ ಹರಿಸುತ್ತೇನೆ. ನಾನು ಬರುವ ಚುನಾವಣೆಯಲ್ಲಿ ಗೆದ್ದರೆ ಗ್ರಾಮದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಗಾಜರಕೋಟ್ ಗ್ರಾಮಸ್ಥನೋರ್ವ, "ಇಷ್ಟು ವರ್ಷ ಅಧಿಕಾರದಲ್ಲಿದ್ದಾಗ ಏನು ಕೆಲಸ ಮಾಡಿದ್ದೀರಿ" ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ಚಿಂಚನಸೂರ್," ಏ ವೋಟ್ ಯಾರಿಗಾದ್ರೂ ಹಾಕು, ಬಿಡು. ನಿನ್ನ ವೋಟ್ ಬೇಕಾಗಿಲ್ಲ ಹೋಗು" ಎಂದು ಗರಂ ಆದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಚಿಂಚನಸೂರ್ ಸ್ಥಳದಿಂದ ತೆರಳಿದರು.
ಇದನ್ನೂ ಓದಿ:ಹಾಡಹಗಲೇ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ - ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ