ಮರು ಸೃಷ್ಟಿಯಾಯ್ತು ಬಾಹುಬಲಿ ದೃಶ್ಯ: ಜೀವದ ಹಂಗು ತೊರೆದು ಮಗನಿಗಾಗಿ ಹರಸಾಹಸ.. ಇದು ರೀಲ್ ಅಲ್ಲ ರಿಯಲ್ - ವಿಡಿಯೋ - ಕುಮುರಂಭೀಮ್
ಕುಮುರಂಭೀಮ್(ತೆಲಂಗಾಣ): ಸೌತ್ ಇಂಡಸ್ಟ್ರೀಯನ್ನೇ ಒಮ್ಮೆ ಹಿಂತಿರುಗಿ ನೋಡುವಂತೆ ಮಾಡಿದ್ದ ಬಾಹುಬಲಿ ಸಿನಿಮಾ ನಿಮಗೆ ಗೊತ್ತೇ ಇದೇ. ಚಿತ್ರದಲ್ಲಿ ಹೈಲೈಟಾಗಿದ್ದು, ಶಿವಗಾಮಿ ಅಮರೇಂದ್ರ ಬಾಹುಬಲಿಯ ಮಗು ಬಾಹುಬಲಿ ಹೊಳೆಯಲ್ಲಿ ತನ್ನ ಕೈಯಲ್ಲಿ ಮೇಲಕೆತ್ತಿ ಮರಣ ಹೊಂದಿದ್ದು. ಇದೀಗ ತೆಲಂಗಾಣದಲ್ಲಿ ಮತ್ತೆ ಇಂಥಹದ್ದೇ ದೃಶ್ಯವೊಂದು ಮರುಸೃಷ್ಟಿಯಾಗಿದೆ. ಆದರೆ, ಇದು ರೀಲ್ ಅಲ್ಲ ರಿಯಲ್ ಮನಕಲಕುವ ಸ್ಟೋರಿ. ಹೌದು ಕುಮುರಂಭೀಮ್ ಆಸಿಫಾಬಾದ್ ಜಿಲ್ಲೆಯ ಕೆರಮೇರಿ ಮಂಡಲದ ಲಕಮಾಪುರದಲ್ಲಿ ಕವಿತಾ ಮತ್ತು ಪವನ್ ದಂಪತಿಯ ಒಂದು ವರ್ಷದ ಮಗ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ.
ಮಗನಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಹೋಗಬೇಕಾದರೆ ಲಕಮಾಪುರ ನದಿ ದಾಟಬೇಕು. ಆದರೆ, ನದಿ ದಾಟಲು ಯಾವುದೇ ಸೇತುವೆಗಳಿಲ್ಲ. ಹೀಗಾಗಿ ಹೆತ್ತ ತಂದೆ ತನ್ನ ಮಗನ ಸ್ಥಿತಿ ನೋಡಲಾರದೇ, ತುಂಬಿದ್ದ ಹೊಳೆಯಲ್ಲಿ ಹತ್ತಿರದ ಸಂಬಂಧಿಯೊಬ್ಬರ ನೆರವಿನಿಂದ ಒಂದು ವರ್ಷದ ಮಗನನ್ನು ಕೈಯಿಂದ ಮೇಲೆತ್ತಿ ಹೊಳೆ ದಾಟಿದ್ದಾರೆ. ಸಾಹಸದ ಮೂಲಕ ಕೊನೆಗೂ ತಂದೆ ಹೊಳೆ ದಾಟಿ ಚಿಕಿತ್ಸೆ ಕೊಡಿಸಲು ಕೆರಮೇರಿಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ತೆಗೆದುಕೊಂಡ ಮೇಲೆ ದಂಪತಿಗಳು ಹೊಳೆ ನೀರು ಕಡಿಮೆಯಾದುದನ್ನು ನೋಡಿ ಪುನಃ ಅದೇ ಹೊಳೆ ದಾಟಿ ಎಚ್ಚರಿಕೆಯಿಂದ ಗ್ರಾಮಕ್ಕೆ ಮರಳಿದ್ದಾರೆ. ತನ್ನ ಕಂದಮ್ಮನಿಗಾಗಿ ತನ್ನ ಜೀವವನ್ನೇ ಪಣಕಿಟ್ಟ ತಂದೆ ಯಾವ ಹೀರೋಗೂ ಕಮ್ಮಿ ಇಲ್ಲ.
ಇದನ್ನೂ ಓದಿ:ಜಲಪಾತದ ಬಂಡೆಗಳ ಮೇಲೆ ಮುಂದುವರೆದ ಪ್ರವಾಸಿಗರ ಅತಿರೇಖದ ವರ್ತನೆ.. ಮೈಮರೆತರೆ ಅಪಾಯ ಖಚಿತ