ಸ್ವಾತಂತ್ರ್ಯ ಅಮೃತ ಮಹೋತ್ಸವ.. ಬಳ್ಳಾರಿಯಲ್ಲಿ ತಿರಂಗಾ ಹಿಡಿದು ಜಯಘೋಷ ಕೂಗಿದ ಸಾವಿರಾರು ಮಂದಿ - Har Ghar Tiranga
ಬಳ್ಳಾರಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಳ್ಳಾರಿಯ ಎಚ್.ಆರ್.ಗವಿಯಪ್ಪ ವೃತ್ತದಲ್ಲಿರುವ 150 ಅಡಿ ಎತ್ತರದ ಬೃಹತ್ ಧ್ವಜಸ್ತಂಭದ ಸುತ್ತ ಸಾವಿರಾರು ಜನರು ತಿರಂಗಾ ಧ್ವಜ ಹಿಡಿದು ಜಯಘೋಷ ಕೂಗಿದರು. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಧ್ವಜಾರೋಹಣ ನೆರವೇರಿಸಿದರು. ನಗರದ ವಿವಿಧ ಶಾಲಾ - ಕಾಲೇಜುಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೈಯಲ್ಲಿ ಧ್ವಜ ಹಿಡಿದು ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ, ದೇಶ ಭಕ್ತಿಗೀತೆಗಳನ್ನು ಹಾಡುತ್ತಾ ತಂಡೋಪ ತಂಡವಾಗಿ ಗವಿಯಪ್ಪ ವೃತ್ತದಲ್ಲಿ ಜಮಾವಣೆಗೊಂಡರು. ಧ್ವಜಾರೋಹಣದಲ್ಲಿ ಶಾಸಕರು, ಡಿಸಿ,ಎಸ್ಪಿ ಸೇರಿದಂತೆ ಜಿಲ್ಲಾ ಮಟ್ಟದ ಆಧಿಕಾಗಳು ಉಪಸ್ಥಿತರಿದ್ದರು.
Last Updated : Feb 3, 2023, 8:26 PM IST