ಚಾಮರಾಜನಗರ: ಚರ್ಚ್ನಲ್ಲೂ ಆಯುಧ ಪೂಜೆ ಸಂಭ್ರಮ!! - ಈಟಿವಿ ಭಾರತ ಕನ್ನಡ
Published : Oct 23, 2023, 1:29 PM IST
ಚಾಮರಾಜನಗರ: ಹಿಂದೂಗಳ ಪವಿತ್ರ ಹಬ್ಬ ದಸರಾ ಹಿನ್ನೆಲೆ ಇಂದು ದೇಶದಾದ್ಯಂತ ಆಯುಧ ಪೂಜೆ ಮಾಡಲಾಗುತ್ತಿದೆ. ವಾಹನಗಳು, ಯಂತ್ರಗಳು ಸೇರಿ ಎಲ್ಲ ಆಯುಧಗಳನ್ನು ಇಟ್ಟು ಈ ದಿನ ವಿಶೇಷವಾಗಿ ಪೂಜಿಸಲಾಗುತ್ತದೆ.
ಚಾಮರಾಜನಗರದಲ್ಲಿ ಕೇವಲ ಹಿಂದೂಗಳು ಮಾತ್ರವಲ್ಲದೇ ಕ್ರೈಸ್ತ ಸಮುದಾಯದವರು ಕೂಡ ಆಯುಧಪೂಜೆ ಆಚರಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯವರೇ ಅಧಿಕ ಸಂಖ್ಯೆಯಲ್ಲಿದ್ದು, ಆಯುಧ ಪೂಜೆ ಹಿನ್ನೆಲೆ ಇಂದು ವಾಹನಗಳನ್ನು ಶುಚಿಗೊಳಿಸಿ, ಅಲಂಕೃತಗೊಳಿಸಿ ಚರ್ಚ್ಗೆ ಕೊಂಡೊಯ್ದು, ಹೂ, ಕುಂಬಳಕಾಯಿ, ತೆಂಗಿನಕಾಯಿ ಒಡೆದು ಆಯುಧ ಪೂಜೆ ನೆರವೇರಿಸಿದ್ದಾರೆ. ಅಲ್ಲಿನ ಪಾದ್ರಿ ಪ್ರಾರ್ಥನೆ ಮಾಡಿ, ಶುಭ ಸಂದೇಶ ತಿಳಿಸಿ ಪವಿತ್ರ ಜಲವನ್ನು ಚರ್ಚ್ಗೆ ತಂದಿದ್ದ ನೂರಾರು ವಾಹನಗಳಿಗೆ ಪ್ರೋಕ್ಷಣೆ ಮಾಡಿ ಯಾವುದೇ ಅಪಘಾತಗಳಾಗದಿರಲಿ, ವಾಹನಗಳು ಶುಭ - ಲಾಭ ತರಲಿ ಎಂದು ಹಾರೈಸಿದ್ದಾರೆ. ಸದ್ಯ ರಾಜ್ಯದಲ್ಲೂ ಆಯುಧ ಪೂಜೆ ವಿಜೃಂಭಣೆಯಿಂದ ನಡಿತಾ ಇದೆ. ಮತ್ತೊಂದೆಡೆ ದಸಾರ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂ, ಹಣ್ಣು ಖರೀದಿ ಕೂಡ ಜೋರಾಗಿದೆ.
ಇದನ್ನೂ ಓದಿ:ಮೈಸೂರಿನಂತೆ ಕರಾವಳಿಯಲ್ಲೂ ನಡೀತಿದೆ ದಸರಾ ಬೊಂಬೆಗಳ ಪ್ರದರ್ಶನ- ವಿಡಿಯೋ