ಕರ್ನಾಟಕ

karnataka

Awareness about voting

By

Published : Apr 29, 2023, 3:46 PM IST

ETV Bharat / videos

ನಾವು ಕೂಡ ವೋಟ್​ ಮಾಡುತ್ತೇವೆ, ನೀವು ಕೂಡ ತಪ್ಪದೇ ವೋಟ್​ ಮಾಡಿ: ಸೆಲೆಬ್ರಿಟಿ, ವಿಐಪಿಗಳ ಮನವಿ

ಇದೇ ಮೇ 10 ರಂದು ರಾಜ್ಯ ವಿಧಾನಸಭಾ ಚುನಾವಣೆ. ಈ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ಹಲವರು ಮತದಾರರಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಇಂದು 'ಈಟಿವಿ ಭಾರತ'ದ ಜೊತೆ ಮಾತನಾಡಿದ ನಟಿಯರಾದ ಮೇಘನಾ ಗಾಂವ್ಕರ್, ಸಂಗೀತಾ ಶೃಂಗೇರಿ ಮತ್ತು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಮತದಾನದ ಕುರಿತು ಮಾತನಾಡಿದ್ದಾರೆ.

ಮೇಘನಾ ಗಾಂವ್ಕರ್: ಮೇ 10 ರಂದು ಚುನಾವಣಾ ದಿನ. ಮರೆಯದೇ ವೋಟ್ ಮಾಡಿ. ವೋಟ್​ ಮಾಡುವುದು ನಮ್ಮ-ನಿಮ್ಮೆಲ್ಲ ಹಕ್ಕು. ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಸಮಾಜಕ್ಕೆ ಉತ್ತಮ ಕೆಲಸಗಳನ್ನು ಮಾಡಬಹುದು. ನನ್ನೊಂದು ಚಿಕ್ಕ ವೋಟ್​ನಿಂದ ಏನಾಗುತ್ತಿದೆ ಎಂದು ಅಂದುಕೊಳ್ಳಬೇಡಿ. ಪ್ರತಿಯೊಂದು ವೋಟ್​ ಕೂಡ ಮಹತ್ವದ್ದು. ಈ ಮೂಲಕ ಉತ್ತಮ ಸಮಾಜವನ್ನು ಕಟ್ಟೋಣ. ಹಾಗಾಗಿ ನಾನು ಕೂಡ ವೋಟ್​ ಮಾಡುವೆ, ನೀವು ಕೂಡ ತಪ್ಪದೇ ವೋಟ್​ ಮಾಡಿ ಎಂದು ನಟಿ ಮೇಘನಾ ಗಾಂವ್ಕರ್ ಮನವಿ ಮಾಡಿದ್ದಾರೆ.

ಸಂಗೀತಾ ಶೃಂಗೇರಿ:ಮೇ 10 ರಂದು ನಾವೆಲ್ಲರೂ ಮತದಾನ ಮಾಡುವಂತಹ ಸುವರ್ಣ ದಿನ. ಐದು ವರ್ಷಗಳ ಬಳಿಕ ಬಂದ ಈ ಅವಕಾಶವನ್ನು ಮಿಸ್​ ಮಾಡಿಕೊಳ್ಳಬೇಡಿ. ಎಲ್ಲರೂ ತಪ್ಪದೇ ಪಾಲನೆ ಮಾಡಿ. ಮತ ಹಾಕುವ ಮೂಲಕ ನಾವೆಲ್ಲರೂ ನಮ್ಮ ಹಕ್ಕನ್ನು ಚಲಾಯಿಸೋಣ. ನಾನು ಕೂಡ ವೋಟ್​ ಮಾಡುವೆ, ನೀವು ಕೂಡ ಮತಗಟ್ಟೆಗೆ ಹೋಗಿ ತಪ್ಪದೇ ಮತದಾನ ಮಾಡಿ ಎಂದು ನಟಿ ಸಂಗೀತಾ ಶೃಂಗೇರಿ ಮನವಿ ಮಾಡಿಕೊಂಡಿದ್ದಾರೆ.

ಸುಧಾ ಮೂರ್ತಿ:ಪ್ರಜಾಪ್ರಭುತ್ವದ ಅಡಿಗಲ್ಲೇ ಮತದಾನ. ಎಲ್ಲ ದಾನಗಳಿಗಿಂತ ಮತದಾನವೇ ಶ್ರೇಷ್ಠ. ನಾವು-ನೀವು ಮತದಾನ ಮಾಡಿದರೆ ಮಾತ್ರ ಸಮಾಜಕ್ಕೆ ಉತ್ತಮ ನಾಯಕನನ್ನು ಆರಿಸಿಕೊಡಲು ಸಾಧ್ಯ. ಮಕ್ಕಳು ಸೇರಿದಂತೆ ನಾವು-ನೀವು ಭವಿಷ್ಯದದಲ್ಲಿ ಸುಭದ್ರ ಜೀವನವನ್ನು ಮುನ್ನೆಡಸಬೇಕೆಂದರೆ ಈ ಮತದಾನ ತುಂಬಾ ಅವಶ್ಯಕ. ಹಾಗಾಗಿ ಮತದಾನ ಮಾಡುವಂತಹ ಈ ಪವಿತ್ರವನ್ನು ಯಾರೂ ತಪ್ಪಿಸಿಕೊಳ್ಳಬೇಡಿ. ಪ್ರತಿಯೊಬ್ಬರು ಮತದಾನ ಮಾಡಿ, ನಿಮ್ಮಿಷ್ಟದ ನಾಯಕನನ್ನು ಆರಿಸಿ. ನಾನು ಕೂಡ ವೋಟ್​ ಮಾಡುವೆ, ನೀವು ಕೂಡ ವೋಟ್​ ಮಾಡಿ ಎಂದು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಾರಿನಲ್ಲಿ ಕೂರುವ ವೇಳೆ ಸ್ಲಿಪ್​​​ ಆದ ಸಿದ್ದರಾಮಯ್ಯ: ನೀರು ಕೊಟ್ಟು ಆರೈಕೆ ಮಾಡಿದ ಸಹಾಯಕ

ABOUT THE AUTHOR

...view details