ಪುರುಷರ ಹಾಕಿ ವಿಶ್ವಕಪ್: ಭಾರತ vs ವೇಲ್ಸ್ ತಂಡದ ಹಾಕಿ ಪಂದ್ಯ ವೀಕ್ಷಿಸಲು ಬಂದ ಕೀನ್ಯಾ ಮಾಜಿ ಹಾಕಿ ಆಟಗಾರ - ಎಫ್ಐಎಚ್ ಪುರುಷರ ಹಾಕಿ ವಿಶ್ವಕಪ ಪಂದ್ಯ
ಭುವನೇಶ್ವರ (ಒಡಿಶಾ):ಇಲ್ಲಿಯ ಕಳಿಂಗ ಮೈದಾನದಲ್ಲಿ ಎಫ್ಐಎಚ್ ಪುರುಷರ ಹಾಕಿ ವಿಶ್ವಕಪ್ ಇಂದಿನ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ವೇಲ್ಸ್ ತಂಡದ ವಿರುದ್ಧ ಸೆಣಸಲಿದೆ. ಇಂದಿನ ಪಂದ್ಯ ಭಾರತದ ಪಾಲಿಗೆ ಮಹತ್ವದಾಗಿದ್ದು ದೊಡ್ಡ ಅಂತರದಿಂದ ಭಾರತ ತಂಡ ಗೆಲವು ಸಾಧಿಸಿದರೆ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. ಅಲ್ಲದೇ ಈ ಮಹತ್ವದ ಪಂದ್ಯ ವೀಕ್ಷಿಸಿಲು ಕ್ರೀಡಾಪ್ರಿಯರು ಮೈದಾನಕ್ಕೆ ಬರುತ್ತಿದ್ದಾರೆ.
ಇನ್ನು ವಿಶೇಷವೆಂದರೆ ಮಹತ್ವದ ಪಂದ್ಯ ವೀಕ್ಷಣೆಗಾಗಿ ಕೀನ್ಯಾ ಹಾಕಿ ತಂಡದ ಮಾಜಿ ಆಟಗಾರ ಅವತಾರ್ ಸಿಂಗ್ ಸೋಲ್ ಮತ್ತು ಸಿಖ್ ಯೂನಿಯನ್ ಕ್ಲಬ್ನ ಹತ್ತು ಸದಸ್ಯರು ಇಲ್ಲಿಗೆ ಬಂದಿದ್ದಾರೆ. ಈ ಬಗ್ಗೆ ಅವತಾರ್ ಸಿಂಗ್ ಸೋಲ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ತಾವು ಭಾರತ ಹಾಕಿ ತಂಡವನ್ನು ಪ್ರಶಂಸಿಸುತ್ತೇವೆ. ಅಲ್ಲದೇ ಸಿಎಂ ಪಟ್ನಾಯಕ್ ಅವರನ್ನೂ ಕೂಡ ಶ್ಲಾಘಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಹಾಕಿ ವಿಶ್ವಕಪ್: ಜರ್ಮನಿ, ಬೆಲ್ಜಿಯಂ ಪಂದ್ಯ ಡ್ರಾದಲ್ಲಿ ಅಂತ್ಯ, ಜಪಾನ್ ಟೂರ್ನಿಯಿಂದ ಹೊರಕ್ಕೆ