ಕರ್ನಾಟಕ

karnataka

ಮಹಿಳೆಯರಿಗೆ ಉಚಿತ ಬಸ್ ಶಕ್ತಿ: ಕಂಗಾಲಾದ ಆಟೋ ಚಾಲಕರು...

ETV Bharat / videos

ನಗರದ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆ ಬೇಡ : ಆಟೋ ಚಾಲಕರ ಆಗ್ರಹ - ಶಕ್ತಿ ಯೋಜನೆ

By

Published : Jun 7, 2023, 8:28 PM IST

ಹುಬ್ಬಳ್ಳಿ:ರಾಜ್ಯ ಸರ್ಕಾರ ಇದೇ ಜೂ.11 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಸರ್ಕಾರದ ತೀರ್ಮಾನದಿಂದ ಪ್ರಯಾಣಿಕರನ್ನೇ ನಂಬಿ ಜೀವನ ನಡೆಸುತ್ತಿರುವು ಆಟೋ ಚಾಲಕರು ಕಂಗಾಲಾಗಿದ್ದಾರೆ. ಮಹಿಳೆಯರಿಗೆ ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಭಾಗ್ಯ ಕೊಟ್ಟಿದೆ. ನಗರ ಪ್ರದೇಶದಲ್ಲಿ ಹೆಚ್ಚಾಗಿ ಮಹಿಳಾ ಪ್ರಯಾಣಿಕರನ್ನೇ ನಂಬಿರುವ ಆಟೋ ಚಾಲಕರು ಈಗ ನಿಶ್ಯಕ್ತರಾಗುವ ಆತಂಕದಲ್ಲಿದ್ದಾರೆ.

ಜಿಲ್ಲೆಯಿಂದ ಜಿಲ್ಲೆಗೆ, ನಗರ ವ್ಯಾಪ್ತಿ ಎಲ್ಲಿಬೇಕಾದರೂ ಓಡಾಟ ಮಾಡಬಹುದು. ಆದ್ರೆ ನಗರ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆ ಜಾರಿ ಮಾಡಬಾರದು ಎಂದು ಆಟೋ ಚಾಲಕರು ಆಗ್ರಹಿಸುತ್ತಿದ್ದಾರೆ. ನಗರ ಪ್ರದೇಶದಲ್ಲಿನ ಮಹಿಳೆಯರು 5-8 ಕಿ.ಮಿ. ದೂರ ಆಟೋ ದಲ್ಲೇ ಪ್ರಯಾಣಿಸುತಿದ್ದರು. ಇನ್ಮೇಲೆ ಈ ಆದಾಯದ ಮೂಲ ಕಳೆದುಕೊಳ್ಳುವ ಆತಂಕದಲ್ಲಿ ಆಟೋ ಚಾಲಕರಿದ್ದಾರೆ. ಬಸ್ ಫ್ರಿ ಆದ್ರೆ ಎಲ್ಲರೂ ಬಸ್​ನಲ್ಲೇ ಪ್ರಯಾಣ ಬೆಳೆಸಲಿದ್ದಾರೆ. ಹೀಗಾದ್ರೆ ನಗರದಲ್ಲಿರುವ ಸಾವಿರಾರು ಆಟೋ ಚಾಲಕರ ಆದಾಯ ತಗ್ಗಲಿದೆ. ಆಟೋ ಮಾರಿ ಕೂಲಿ ಕೆಲಸಕ್ಕೆ ಹೋಗಬೇಕಾಗುತ್ತದೆ ಎಂದು ಆಟೋ ಚಾಲಕರು ಅಳಲು ತೊಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಶಕ್ತಿ ಯೋಜನೆಯಿಂದ ಹೊರಗುಳಿದ ಚಿಗರಿ: ಹು-ಧಾ ಮಹಿಳೆಯರಿಗೆ ಎಸಿ ಬಸ್ ಪ್ರಯಾಣ ಭಾಗ್ಯವಿಲ್ಲ

ABOUT THE AUTHOR

...view details