ಕರ್ನಾಟಕ

karnataka

ಬೆಂಗಳೂರು: ಪ್ರಯಾಣಿಕನ ಮೇಲೆ ಆಟೋ ಹತ್ತಿಸಲು ಯತ್ನ!

ETV Bharat / videos

ಬೆಂಗಳೂರು: ಪ್ರಯಾಣಿಕನ ಮೇಲೆ ಆಟೋ ಹತ್ತಿಸಲು ಯತ್ನ! ವಿಡಿಯೋ ವೈರಲ್​​​ - ಸಿಸಿಟಿವಿ ದೃಶ್ಯ

By

Published : May 25, 2023, 4:25 PM IST

ಬೆಂಗಳೂರು:ರ‍್ಯಾಪಿಡೋ ದ್ವಿಚಕ್ರ ವಾಹನ ಬುಕ್ ಮಾಡಲು ಹೊರಟ ಟೆಕ್ಕಿಯ ಮೇಲೆ ಆಟೋ ಹರಿಸಲು ಯತ್ನಿಸಿರುವ ಘಟನೆ ಇಂದು ಬೆಳಗಿನ ಜಾವ ಹೆಚ್ಎಸ್ಆರ್ ಲೇಔಟ್​​​ನ ಸೆಕ್ಟರ್ 1ರಲ್ಲಿ ನಡೆದಿದೆ. 3.30ರ ಸುಮಾರಿಗೆ ಟೆಕ್ಕಿಯೊಬ್ಬ ಆಟೋ ಬಳಿ ತಾನು ಹೋಗಬೇಕಾಗಿದ್ದ ಜಾಗಕ್ಕೆ ತಗುಲುವ ದರವನ್ನು ಕೇಳಿದ್ದಾನೆ. 

ಆ ದರ ದುಬಾರಿಯಾಗಿದ್ದ ಕಾರಣ ಅಷ್ಟು ಹಣ ನೀಡಲು ಟೆಕ್ಕಿ ನಿರಾಕರಿಸಿ ರ‍್ಯಾಪಿಡೋ ದ್ವಿಚಕ್ರ ವಾಹನ ಬುಕ್ ಮಾಡಲು ನಿರ್ಧರಿಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಆಟೋ ಚಾಲಕ ರ‍್ಯಾಪಿಡೋ ಬುಕ್​ ಮಾಡುವುದನ್ನು ಗಮನಿಸಿ, ಕೋಪಗೊಂಡು ಏಕಾಏಕಿ ಟೆಕ್ಕಿಯ ಮೇಲೆ ಆಟೋ ನುಗ್ಗಿಸಿದ್ದಾನೆ. ಆಟೋ ಡಿಕ್ಕಿಯಾದ ರಭಸಕ್ಕೆ ಟೆಕ್ಕಿ ರಸ್ತೆ ಬದಿಯಲ್ಲಿ‌ ಬಿದ್ದು ಗಾಯಗೊಂಡಿದ್ದಾನೆ. ಚಾಲಕನ ಗೂಂಡಾ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಸಿಟಿವಿ ದೃಶ್ಯದಲ್ಲಿ ಟೆಕ್ಕಿ ಆಟೋ ಚಾಲಕನೊಂದಿಗೆ ಸ್ವಲ್ಪ ಸಮಯ ಮಾತನಾಡಿ, ವಾಹನದಿಂದ ದೂರ ಹೋಗುತ್ತಿರುವುದು, ಬಳಿಕ ಆಟೋ ಚಾಲಕ ಏಕಾಏಕಿ ಆತನ ಮೇಲೆ ವಾಹನ ಡಿಕ್ಕಿ ಹೊಡೆದಿದ್ದಾನೆ. ಟೆಕ್ಕಿ ರಸ್ತೆಗೆ ಬಿದ್ದಿದ್ದು, ಎದ್ದು ಬರುವಷ್ಟರಲ್ಲಿ ಆಟೋ ಚಾಲಕ ಪರಾರಿಯಾಗಿದ್ದಾನೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಪೊಲೀಸರು ಆಟೋ ಚಾಲಕನಿಗಾಗಿ ಶೋಧ ನಡೆಸಿದ್ದಾರೆ. ಟೆಕ್ಕಿಯ ಗುರುತು ಇನ್ನೂ ತಿಳಿದುಬಂದಿಲ್ಲ.

ಒಂದು ತಿಂಗಳ ಹಿಂದೆಯೂ ಸಹ ರ‍್ಯಾಪಿಡೋ ಕ್ಯಾಪ್ಟನ್​ನನ್ನು ತಡೆದ ಆಟೋ ಚಾಲಕನೊಬ್ಬ ಆತನ ಕೈಯಲ್ಲಿದ್ದ ಹೆಲ್ಮೆಟ್ ಒಡೆದು, ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ದಬ್ಬಾಳಿಕೆ ಮೆರೆದಿರುವ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿತ್ತು. ಆಟೋ ನಿಲ್ದಾಣದ ಬಳಿ ಗ್ರಾಹಕರನ್ನು ತನ್ನ ಸ್ಕೂಟರಿಗೆ ಹತ್ತಿಸಿಕೊಂಡ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಆಟೋ ಚಾಲಕ ಪುಡಿ ರೌಡಿಯಂತೆ ತನ್ನ ಪುಂಡಾಟಿಕೆ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನೂ ನೋಡಿ:ಸೇನಾ ವಾಹನಕ್ಕೆ ರಭಸವಾಗಿ ಗುದ್ದಿದ ಟ್ರಕ್​, ಇಬ್ಬರು ಯೋಧರಿಗೆ ಗಾಯ: ವಿಡಿಯೋ

ABOUT THE AUTHOR

...view details