ಕುಟುಂಬದೊಂದಿಗೆ ತಾಜ್ ಮಹಲ್ಗೆ ಭೇಟಿ ನೀಡಿದ ಆಸ್ಟ್ರೇಲಿಯಾ ಕ್ರಿಕೆಟಿಗ ಆ್ಯಡಮ್ ಝಂಪಾ- ವಿಡಿಯೋ - ETV Bharath Karnataka
Published : Oct 23, 2023, 3:48 PM IST
ಆಗ್ರಾ (ಉತ್ತರ ಪ್ರದೇಶ): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಆ್ಯಡಮ್ ಝಂಪಾ ಸೋಮವಾರ ತಮ್ಮ ಕುಟುಂಬದೊಂದಿಗೆ ಆಗ್ರಾದ ಪ್ರಸಿದ್ಧ ತಾಜ್ ಮಹಲ್ಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ತಾಯಿ ಪಾಲ್ಮಿಯರ್, ಪತ್ನಿ ಹ್ಯಾರಿಯೆಟ್ ಮತ್ತು ಮಗ ಇದ್ದರು. ಸುಮಾರು ಎರಡು ಗಂಟೆಗಳ ಕಾಲ ಪ್ರವಾಸಿ ತಾಣದಲ್ಲಿ ಸಮಯ ಕಳೆದರು.
ತಾಜ್ ಮಹಲ್ನಲ್ಲಿ ಗೈಡ್ ಪಡೆದ ಅವರು ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮುಮ್ತಾಜ್‌ಗಾಗಿ ನಿರ್ಮಿಸಿದ ಪ್ರೇಮಸೌಧದ ಇತಿಹಾಸ ಕೇಳಿ ತಿಳಿದುಕೊಂಡರು. ಸೋಮವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಕುಟುಂಬದೊಂದಿಗೆ ಝಂಪಾ ಆಗ್ರಾ ತಲುಪಿದ್ದರು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ ನಡುವೆ ಅಕ್ಟೋಬರ್ 25ರಂದು ಕ್ರಿಕೆಟ್ ಪಂದ್ಯ ನಡೆಯಲಿದೆ. ಹೀಗಾಗಿ ಆಸ್ಟ್ರೇಲಿಯಾ ಆಟಗಾರರು ದೆಹಲಿಗೆ ಬಂದಿಳಿದಿದ್ದಾರೆ. ಅ.20ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನವನ್ನು ಮಣಿಸಿ ಎರಡು ಗೆಲುವು ಕಂಡಿರುವ ಕಾಂಗರೂ ಪಡೆ ಇದೀಗ ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿದೆ.
ಇದನ್ನೂ ಓದಿ:ನ್ಯೂಜಿಲೆಂಡ್ ವಿರುದ್ದ ಕೊಹ್ಲಿ ಅಬ್ಬರ: ಪತಿಯ ಆಟಕ್ಕೆ ಮನಸೋತ ಪತ್ನಿ ಅನುಷ್ಕಾ ಇನ್ಸ್ಟಾದಲ್ಲಿ ಮೆಚ್ಚುಗೆ