ಕರ್ನಾಟಕ

karnataka

ಪ್ರತ್ಯೇಕ‌ ರಾಜ್ಯದ ಧ್ವಜಾರೋಹಣ

ETV Bharat / videos

ಕಲಬುರಗಿ: ಪ್ರತ್ಯೇಕ‌ ರಾಜ್ಯದ ಧ್ವಜಾರೋಹಣ ಯತ್ನ; ಹಲವರ ಬಂಧನ - ​ ETV Bharat Karnataka

By ETV Bharat Karnataka Team

Published : Nov 1, 2023, 10:06 AM IST

Updated : Nov 1, 2023, 10:35 AM IST

ಕಲಬುರಗಿ:ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಇಂದುಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಯತ್ನಿಸಿದ ಸಂಘಟನೆಯೊಂದರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸಂಸ್ಥಾಪಕ ಎಂ.ಎಸ್.ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಯತ್ನ ನಡೆಯಿತು.

ಪ್ರತ್ಯೇಕ ಧ್ವಜಾರೋಹಣಕ್ಕೆಂದು ಜಿಲ್ಲಾ ನ್ಯಾಯಾಲಯ ಮಾರ್ಗದಿಂದ ಪಟೇಲ್ ವೃತ್ತಕ್ಕೆ ಆಗಮಿಸುವ ಸಂದರ್ಭಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದರು. ರಾಜ್ಯ ಸರ್ಕಾರವು ಅಭಿವೃದ್ಧಿ ವಿಚಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ಅಸಮತೋಲನ ಸರಿಪಡಿಸಲು ಜಾರಿಗೆ ತಂದ ಕಲಂ 371 ಜೆ ಸಮರ್ಪಕ ಅನುಷ್ಠಾನಕ್ಕೆ ತರುವಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯನ್ನು ಉಪ ರಾಜಧಾನಿಯಾಗಿ ಘೋಷಣೆ ಮಾಡಬೇಕು.‌ ಇಲ್ಲದಿದ್ದರೆ ಏಳು ಜಿಲ್ಲೆಗಳ ಪ್ರತ್ಯೇಕ ರಾಜ್ಯಕ್ಕಾಗಿ ಉಗ್ರ ಹೋರಾಟ ಮಾಡುವುದಾಗಿ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದ್ದಾರೆ.     

ಇದನ್ನೂ ಓದಿ :'ಕನ್ನಡಕ್ಕೆ ಮಾನ್ಯತೆ ಸಿಗಲಿ, ದೇವರಾಜ ಅರಸು ಅವರನ್ನು ನೆನಪಿಸಿಕೊಳ್ಳಲಿ': ಹಿರಿಯ ಸಾಹಿತಿಗಳ ಸಂದರ್ಶನ

Last Updated : Nov 1, 2023, 10:35 AM IST

ABOUT THE AUTHOR

...view details