ಅಸ್ಸೋಂ ರಾಜ್ಯದ ಆರು ಜಿಲ್ಲೆಗಳಲ್ಲಿ ಭೀಕರ ಪ್ರವಾಹ: 21,000ಕ್ಕೂ ಜನರು ತತ್ತರ - ಅಸ್ಸೋಂ ರಾಜ್ಯ
ಗುವಾಹಟಿ (ಅಸ್ಸೋಂ): ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ಮತ್ತೆ ಆತಂಕಕಾರಿ ಹಂತಕ್ಕೆ ತಲುಪಿದೆ. ಪ್ರಸ್ತುತ ರಾಜ್ಯದ 6 ಜಿಲ್ಲೆಗಳು ಹಾಗೂ ಒಂದು ಉಪ ವಿಭಾಗದಲ್ಲಿ 21,000ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಆರು ಜಿಲ್ಲೆಗಳಲ್ಲಿ ಒಟ್ಟು 21,723 ಜನರು ಲಖಿಂಪುರ, ಧೇಮಾಜಿ, ಚರೈಡಿಯೊ, ಜೋರ್ಹತ್, ಕರೀಮ್‌ಗಂಜ್, ಕಾಮ್ರೂಪ್ ಮತ್ತು ಬಿಸ್ವನಾಥ್ ಉಪವಿಭಾಗಗಳು ಪ್ರವಾಹದಲ್ಲಿ ಸಿಲುಕಿದ್ದಾರೆ.
ಅಸ್ಸೋಂ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ನಿರಂತರ ಮಳೆಯ ನಂತರ, ದಿಚಾಂಗ್ ನದಿ ಮತ್ತು ದಿಖೋವ್ ನದಿಯು ನಂಗ್ಲಾಮುರಘಾಟ್ ಮತ್ತು ಶಿವಸಾಗರ್ ಪ್ರದೇಶಗಳಲ್ಲಿ ಅಪಾಯದ ಮಟ್ಟಕ್ಕಿಂತ ಮೀರಿ ಹರಿಯುತ್ತಿವೆ. ಹಲವು ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.
ಧೇಮಾಜಿಯಲ್ಲಿ ಭಜೋ ಗ್ರಾಮದ ಜಿಯಾಧಾಲ್‌ನ ಕಂಕು ಹೊಳೆಯಿಂದ ಜಿಯಾಧಾಲ್‌ನ ಪ್ರದೇಶಗಳು ಜಲಾವೃತಗೊಂಡಿವೆ. ಶನಿವಾರವೂ ರಾಷ್ಟ್ರೀಯ ಹೆದ್ದಾರಿ 15ರಲ್ಲಿ ನೀರು ಹರಿಯುತ್ತಿದ್ದು, ಸ್ವಲ್ಪಮಟ್ಟಿಗೆ ನೀರಿನ ಪ್ರಮಾಣ ಇಳಿಮುಖವಾಗಿತ್ತು.
ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿಯ ಪ್ರಕಾರ, ಧೇಮಾಜಿ ಜಿಲ್ಲೆಯಲ್ಲಿ 11,659 ಜನರು ಮತ್ತು ಲಖಿಂಪುರ ಜಿಲ್ಲೆಯಲ್ಲಿ 7,516 ಜನರು ಪ್ರವಾಹ ಪೀಡಿತರಾಗಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 1479.27 ಹೆಕ್ಟೇರ್ ಬೆಳೆಗಳು ಜಲಾವೃತವಾಗಿವೆ. ಜೊತೆಗೆ ಪ್ರವಾಹದಿಂದಾಗಿ 24,261 ಸಾಕು ಪ್ರಾಣಿಗಳು ತೊಂದರೆ ಅನುಭವಿಸಿವೆ.
ಇದನ್ನೂ ಓದಿ:ಕೆರೆಗೆ ಈಜಲು ಹೋಗಿದ್ದ ಐವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ