ಅಮಾಯಕರ ಮೇಲೆ ಚಿರತೆ ದಾಳಿ.. ಎಂಟು ಜನರಿಗೆ ಗಾಯ, ಕಾರಿನ ಮೇಲೆ ಎರಗಿದ ಬಿಗ್ ಕ್ಯಾಟ್ - ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಚಿರತೆ ಹಾವಳಿ
ಸೋಮವಾರ ಮಧ್ಯಾಹ್ನ ಅಸ್ಸೋಂನ ಜೋರ್ಹತ್ ಜಿಲ್ಲೆಯ ಟಿಯೋಕ್ ಪ್ರಾಂತದ ಶತಾಯ್ ರೈನ್‌ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಚಿರತೆ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ. ಇನ್‌ಸ್ಟಿಟ್ಯೂಟ್‌ನ ಗೋಡೆಯನ್ನು ಜಿಗಿದು ಕ್ಯಾಂಪಸ್‌ನಲ್ಲಿದ್ದ ಜನರ ಮೇಲೆ ಚಿರತೆ ದಾಳಿ ಮಾಡಿದ್ದು, ಎಂಟು ಜನರು ಗಾಯಗೊಂಡಿದ್ದಾರೆ. ಬಳಿಕ ಓಮಿನಿ ಮೇಲೆಯೂ ಚಿರತೆ ದಾಳಿ ಮಾಡಿದೆ. ಸುದ್ದಿ ತಿಳಿದಾಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಸೆರೆಹಿಡಿಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ತಪ್ಪಿಸಿಕೊಂಡು ಕಾಡಿನತ್ತ ಓಡಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜೋರ್ಹತ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated : Feb 3, 2023, 8:37 PM IST