ಕರ್ನಾಟಕ

karnataka

ETV Bharat / videos

ನಾಳೆ ಕೂಡಲಸಂಗಮ, ಗೋಕರ್ಣದಲ್ಲಿ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ - ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ

By

Published : Jan 7, 2023, 10:13 PM IST

Updated : Feb 3, 2023, 8:38 PM IST

ವಿಜಯಪುರ: ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ ಕಾರ್ಯಕ್ರಮವು ನಾಳೆ (ಭಾನುವಾರ) ಬಾಗಲಕೋಟೆ ಜಿಲ್ಲೆಯ ಬಸವ ಐಕ್ಯಸ್ಥಳ ಕೂಡಲಸಂಗಮ ಹಾಗೂ ಉತ್ತರಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ನೇರವೇರಲಿದೆ. ಈ ಬಗ್ಗೆ ಜ್ಞಾನ ಯೋಗಾಶ್ರಮವು ಪ್ರಕಟಣೆಯಲ್ಲಿ ತಿಳಿಸಿದೆ.‌ ಆಶ್ರಮದಿಂದ ಮುಂಜಾನೆ 4 ಗಂಟೆಗೆ ಕೂಡಲಸಂಗಮಕ್ಕೆ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ತೆಗೆದುಕೊಂಡು ವಾಹನಗಳು ಹೊರಡಲಿವೆ.‌ ವಿಜಯಪುರದಿಂದ 300ಕ್ಕೂ ಅಧಿಕ ವಾಹನಗಳಲ್ಲಿ ಭಕ್ತಾಧಿಗಳು ತೆರಳುವ ಸಾಧ್ಯತೆ ಇದೆ.‌ ಯಾವುದೇ ವಾಹನದ ವ್ಯವಸ್ಥೆ ಇಲ್ಲ, ಭಕ್ತರೇ ನೇರವಾಗಿ ಕೂಡಲಸಂಗಮಕ್ಕೆ ಆಗಮಿಸುವಂತೆ ಜ್ಞಾನಯೋಗಾಶ್ರಮದ ಶ್ರೀಗಳು ಮನವಿ ಮಾಡಿದ್ದಾರೆ. ಕೂಡಲಸಂಗಮದಿಂದಲೇ ವಾಹನಗಳು ಗೋಕರ್ಣಕ್ಕೆ ತೆರಳಲಿವೆ.
Last Updated : Feb 3, 2023, 8:38 PM IST

ABOUT THE AUTHOR

...view details