ಕರ್ನಾಟಕ

karnataka

ಆಪ್​ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರವಿಚಂದ್ರ ನೆರಬೆಂಚಿ ಸುದ್ದಿಗೋಷ್ಠಿ

ETV Bharat / videos

ರಾಜ್ಯದ ಎಲ್ಲ ಕ್ಷೇತ್ರಗಳಿಂದ ಆಪ್‌ ಕಣಕ್ಕೆ; ರಾಜ್ಯಕ್ಕೆ ಬರಲಿದ್ದಾರಂತೆ ಕೇಜ್ರಿವಾಲ್ - ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

By

Published : Feb 7, 2023, 5:27 PM IST

Updated : Feb 14, 2023, 11:34 AM IST

ಹುಬ್ಬಳ್ಳಿ: "ಆಮ್ ಆದ್ಮಿ ಪಕ್ಷ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಮೊದಲ ಪಟ್ಟಿಯನ್ನು ಮಾರ್ಚ್​ನಲ್ಲಿ ಬಿಡುಗಡೆ ಮಾಡಲಾಗುವುದು. ಚುನಾವಣೆ ಹಾಗೂ ರಾಜ್ಯದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮಾ. 4ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ಅರವಿಂದ ಕೇಜ್ರಿವಾಲ್ ಆಗಮಿಸಲಿದ್ದಾರೆ" ಎಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರವಿಚಂದ್ರ ನೆರಬೆಂಚಿ ತಿಳಿಸಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೊದಲ ಪಟ್ಟಿ ಬಿಡುಗಡೆ ಕ್ರೇಜಿವಾಲ್ ನೇತೃತ್ವದಲ್ಲಿ ನಡೆಯಲಿದ್ದು, ದಾವಣಗೆರೆ ಮಧ್ಯ ಭಾಗದಲ್ಲಿ ಕಾರ್ಯಕ್ರಮ ನಡೆಯಲಿದೆ‌ ಅಂದಿನಿಂದಲ್ಲೇ ಚುನಾವಣೆ ಯಾತ್ರೆ ಆರಂಭವಾಗುತ್ತದೆ. ಈ ಬಾರಿಯ ಚುನಾವಣೆ ಭಾರಿ ಕುತೂಹಲ ಸೃಷ್ಟಿಸಿದ್ದು, ರಾಜ್ಯದ ಪ್ರಣಾಳಿಕೆ ಪಕ್ಷದ ಮುಖಂಡ ಭಾಸ್ಕರ್ ರಾವ್ ಅಧ್ಯಕ್ಷತೆಯಲ್ಲಿ ಸಿದ್ದಗೊಳ್ಳುತ್ತಿದೆ. ಪ್ರಣಾಳಿಕೆಯನ್ನು ರೈತರ, ಕಾರ್ಮಿಕರ, ಸರ್ಕಾರಿ ನೌಕರರ, ಮಹಿಳೆಯರ ಹಾಗೂ ಯುವಜನರಿಗೆ ಸಂಬಂಧಿಸಿದ ಅಂಶಗಳನ್ನು ಇಟ್ಟುಕೊಂಡು ತಯಾರಿಸಲಾಗುವುದು. ಮುಖ್ಯಮಂತ್ರಿ ಚಂದ್ರು ಅವರು ಪ್ರಚಾರ ಸಮಿತಿಯ ನೇತೃತ್ವ ವಹಿಸಿದ್ದಾರೆ. ಮುಂದಿನ ವಾರ ಹುಬ್ಬಳ್ಳಿ ಸೇರಿದಂತೆ ಕರ್ನಾಟಕದಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅನಂತ ಕುಮಾರ್ ಬುಗಡಿ, ವಿಕಾಸ ಸೊಪ್ಪಿನ, ಪ್ರವೀಣ್ ನಡಕಟ್ಟಿ, ಶಶಿಕುಮಾರ್ ಸುಳ್ಳದ, ಮಲ್ಲಪ್ಪ ತಡಸದ ಉಪಸ್ಥಿತರಿದ್ದರು.

ಇದನ್ನೂ ಓದಿ:ಪ್ರಧಾನಿ ಮೋದಿಗೆ 5 ಪ್ರಶ್ನೆಗಳ ಸವಾಲು ಇಟ್ಟ ಆಪ್​​​

Last Updated : Feb 14, 2023, 11:34 AM IST

ABOUT THE AUTHOR

...view details