ಕರ್ನಾಟಕ

karnataka

ಬುತ್ತಿ ಜಾತ್ರೆಯಲ್ಲಿ ಸಿದ್ದೇಶ್ವರ ಶ್ರೀಗಳ ಚಿತ್ರ ಬಿಡಿಸಿ ಗಮನ ಸೆಳೆದ ಕಲಾವಿದ

ETV Bharat / videos

ಬುತ್ತಿ ಜಾತ್ರೆಯಲ್ಲಿ ಸಿದ್ದೇಶ್ವರ ಶ್ರೀಗಳ ಚಿತ್ರ ಬಿಡಿಸಿದ ಕಲಾವಿದ- ವಿಡಿಯೋ - ಯುವ ಕಲಾವಿದ ಆನಂದ ಚನ್ನಯ್ಯ ಪತ್ರಿಮಠ

By

Published : Mar 10, 2023, 8:29 AM IST

ಕುಷ್ಟಗಿ:ತಳವಗೇರಾದ ಶರಣಬಸವೇಶ್ವರ ಬುತ್ತಿ ಜಾತ್ರೋತ್ಸವದಲ್ಲಿತಾಲೂಕಿನ ಯುವ ಕಲಾವಿದ ಆನಂದ ಚನ್ನಯ್ಯ ಪತ್ರಿಮಠ ವಿಜಯಪುರ ಜ್ಞಾನಯೋಗಾಶ್ರಮದ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ‌‌ ಚಿತ್ರ ಬಿಡಿಸಿ ಕಲಾ ನಮನ ಸಲ್ಲಿಸಿದರು. ಕ್ಯಾನ್ವಾಸ್ ತಿರುವುಮುರುವಾಗಿ ಇಟ್ಟುಕೊಂಡು​ ಶ್ರೀಗಳ ಚಿತ್ರ ಅರಳಿಸಿರುವುದು ಮತ್ತೊಂದು ವಿಶೇಷವಾಗಿತ್ತು. ಕೊನೆಯಲ್ಲಿ ಆನಂದ ಅವರು ಮಿಂಚಿನ ಬಣ್ಣ ಎರಚಿ ಮೂರ್ತ ಸ್ವರೂಪದಲ್ಲಿ ಸ್ವಾಮೀಜಿಯ ಚಿತ್ರ ರಚಿಸಿ ಸೈ ಎನಿಸಿಕೊಂಡರು.

ಈ ವೇಳೆ ನೆರೆದಿದ್ದ ಜನರು ಸಂತನೆಂದರೆ ಯಾರು.. ಎಂಬ ಹಾಡು ಆಲಿಸುತ್ತ ಸ್ತಬ್ಧವಾಗಿ ಕುಳಿತು ಯುವ ಕಲಾವಿದನ ಕೈಚಳಕವನ್ನು ವೀಕ್ಷಿಸಿದರು. ಚಿತ್ರ ಪೂರ್ಣಗೊಳ್ಳುತ್ತಿದ್ದಂತೆ ಚಪ್ಪಾಳೆ ಸದ್ದು ಮೊಳಗಿತು. ಆನಂದ ಚನ್ನಯ್ಯ ಅವರು ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದವರು. ಇಲಕಲ್ ವಿಜಯ ಚಿತ್ರಕಲಾ ಮಂದಿರದ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಬಿವಿಎ (Master of Visual Art) ಅಭ್ಯಾಸ ಮಾಡಿದ್ದಾರೆ. ಈ ಹಿಂದೆಯೂ ಅನೇಕ ಮಹನೀಯರ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ಈ ಬಾರಿಯ ಬುತ್ತಿ ಜಾತ್ರೆಯಲ್ಲಿ 'ಐ ಲವ್​​ ತಳವಗೇರಾ' ಸೆಲ್ಫಿ ಪಾಯಿಂಟ್ ಕೂಡ ಎಲ್ಲರ ಆಕರ್ಷಣೆಯಾಗಿತ್ತು. 

ಇದನ್ನೂ ಓದಿ:ಗಂಡು ಮೆಟ್ಟಿದ ನಾಡಿನಲ್ಲಿ ಗಂಡು ಮಕ್ಕಳ ಹಬ್ಬ: ವಿಶಿಷ್ಠತೆ ಪಡೆದುಕೊಂಡ ಜಗ್ಗಲಗಿ ಸಂಭ್ರಮ

ABOUT THE AUTHOR

...view details