ಕರ್ನಾಟಕ

karnataka

ಸೇನಾ ಹೆಲಿಕಾಪ್ಟರ್‌ನ ತುರ್ತು ಭೂಸ್ಪರ್ಶ

ETV Bharat / videos

ಹರಿಯಾಣ: ಸೇನಾ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ - ಹೆಲಿಕಾಪ್ಟರ್​ ತುರ್ತು ಭೂಸ್ಪರ್ಶ

By ETV Bharat Karnataka Team

Published : Dec 7, 2023, 2:44 PM IST

ಹರಿಯಾಣ: ತಾಂತ್ರಿಕ ದೋಷದಿಂದ ಭಾರತೀಯ ಸೇನಾ ಹೆಲಿಕಾಪ್ಟರ್ ಯಮುನಾನಗರದ ಜಥೇಡಿ ಗ್ರಾಮದಲ್ಲಿ ಗುರುವಾರ ತುರ್ತು ಭೂಸ್ಪರ್ಶ ಮಾಡಿತು. ಈ ಹೆಲಿಕಾಪ್ಟರ್‌ನಲ್ಲಿ ನಾಲ್ಕು ಮಂದಿ ವಾಯುಪಡೆ ಸಿಬ್ಬಂದಿ ಇದ್ದರು. ಇದೇ ವೇಳೆ ಮತ್ತೊಂದು ಹೆಲಿಕಾಪ್ಟರ್‌ ಕೂಡಾ ಆಗಮಿಸುತ್ತಿತ್ತು. ಮಾಹಿತಿ ಪಡೆದ ತಕ್ಷಣ ಸೇನಾ ಸಿಬ್ಬಂದಿ ಹಾಗೂ ಎಂಜಿನಿಯರ್‌ಗಳ ತಂಡ, ಘಟನಾ ಸ್ಥಳಕ್ಕೆ ಆಗಮಿಸಿ ದೋಷ ಸರಿಪಡಿಸಿದ್ದಾರೆ. ಸುಮಾರು ಒಂದು ಗಂಟೆಯ ಬಳಿಕ ಹೆಲಿಕಾಪ್ಟರ್ ಮತ್ತೆ ಟೇಕಾಫ್ ಆಗಿದೆ. 

ಎರಡು ಸೇನಾ ಹೆಲಿಕಾಪ್ಟರ್‌ಗಳು ಹೊಲದಲ್ಲಿ ಇಳಿಯುತ್ತಿದ್ದಂತೆ ಸುತ್ತಮುತ್ತಲ ಗ್ರಾಮದ ನೂರಾರು ಜನ ತಂಡೋಪತಂಡವಾಗಿ ಆಗಮಿಸಿ ಹೆಲಿಕಾಪ್ಟರ್‌ಗಳ ಪಕ್ಕ ನಿಂತು ಸೆಲ್ಫಿ ತೆಗೆದುಕೊಳ್ಳಲು ಆರಂಭಿಸಿದರು. ಛಚ್ರೌಲಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಜನರನ್ನು ನಿಯಂತ್ರಿಸಿದರು. ಈ ಹೆಲಿಕಾಪ್ಟರ್‌ಗಳು ಎಲ್ಲಿಂದ ಬಂದಿವೆ ಮತ್ತು ಎಲ್ಲಿಗೆ ತೆರಳುತ್ತಿದ್ದವು ಎಂಬ ಮಾಹಿತಿ ದೊರೆತಿಲ್ಲ. ಆದರೆ, ತಾಂತ್ರಿಕ ದೋಷದಿಂದ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಿಸಿದ್ದು, ದುರಸ್ತಿ ಬಳಿಕ ಮತ್ತೆ ಟೇಕಾಫ್ ಆಗಿದೆ ಎಂದು ಡಿಎಸ್ಪಿ ಪ್ರಮೋದ್ ಖಚಿತಪಡಿಸಿದ್ದಾರೆ.

ಇದನ್ನೂ ಓದಿ:ಭೋಪಾಲ್‌: ಜಮೀನಿನಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಸೇನಾ ಸಿಬ್ಬಂದಿ ಸುರಕ್ಷಿತ

ABOUT THE AUTHOR

...view details