ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹಾವಿಗೆ ಇರುವೆ ಕಾಟ - ವಿಡಿಯೋ
ಮಂಗಳೂರು: ನಗರದ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಹಾವಿಗೆ ಇರುವೆಗಳು ದಾಳಿ ನಡೆಸಿದ್ದು, ಹಾವು ಒದ್ದಾಟ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಲಿಕುಳ ಜೈವಿಕ ಉದ್ಯಾನದಲ್ಲಿರುವ ಉರಗಾಲಯದಲ್ಲಿದ್ದ ಬಾಂಡೆಡ್ ಲೇಸರ್ ಎಂಬ ಹಾವಿನ ಮೇಲೆ ಇರುವೆಗಳು ದಾಳಿ ನಡೆಸಿವೆ. ಇರುವೆಗಳ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲು ಹಾವು ಒದ್ದಾಡುತ್ತಿರುವ ದೃಶ್ಯವನ್ನು ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಅವರು, ಈ ಸಂದರ್ಭದಲ್ಲಿ ಇರುವೆಗಳ ಕಾಣಿಸಿಕೊಳ್ಳುವುದು ಸಾಮಾನ್ಯ. ಇರುವೆಗಳು ಕಾಣಿಸಿಕೊಂಡ ತಕ್ಷಣವೇ ಕೋಣೆಯನ್ನು ಸ್ವಚ್ಚಗೊಳಿಸಲಾಗಿದೆ. ಹಾವಿಗೆ ಯಾವುದೇ ತೊಂದರೆಯಾಗಿಲ್ಲ. ಅದು ಎಂದಿನಂತೆ ಚಟುವಟಿಕೆಯಿಂದ ಇದೆ ಎಂದು ತಿಳಿಸಿದ್ದಾರೆ.
Last Updated : Feb 3, 2023, 8:29 PM IST