ಪುರಿ ಜಗನ್ನಾಥ ದೇವಸ್ಥಾನಕ್ಕೆ ಅನಂತ್ ಅಂಬಾನಿ ಭೇಟಿ.. ವಿಡಿಯೋ - ಮುಖೇಶ್ ಅಂಬಾನಿ ಪುತ್ರ ಅನಂತ್
ಪುರಿ (ಒಡಿಶಾ): ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನಕ್ಕೆ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮಂಗಳವಾರ ಭೇಟಿ ನೀಡಿದರು. ಅನಂತ್ ಅಂಬಾನಿ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಸ್ವಾಗತಿಸಿದರು. ನಂತರ ಜಗನ್ನಾಥನ ದರ್ಶನ ಪಡೆದು ಅನಂತ್ ಪ್ರಾರ್ಥನೆ ಸಲ್ಲಿಸಿದರು. ಅಂಬಾನಿ ಪುತ್ರನ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಇದೇ ಜನವರಿ 19ರಂದು ಮತ್ತೊಬ್ಬ ಪ್ರಮುಖ ಉದ್ಯಮಿ ಬಿರೇನ್ ಮರ್ಚೆಂಟ್ ಮತ್ತು ಶೈಲ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಅನಂತ್ ಅಂಬಾನಿ ನಿಶ್ಚಿತಾರ್ಥ ನೆರವೇರಿತ್ತು. ಇಂದು ಮಧ್ಯಾಹ್ನ ಪುರಿ ಜಗನ್ನಾಥನ ದರ್ಶನ ಪಡೆಯುವ ನಿಟ್ಟಿನಲ್ಲಿ ಅನಂತ್ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ನೇರವಾಗಿ ಪುರಿಗೆ ಆಗಮಿಸಿ ದೇವರ ದರ್ಶನ ಪಡೆದರು.
ಇದನ್ನೂ ಓದಿ:ಅನಂತ್ ಅಂಬಾನಿ ಮತ್ತು ರಾಧಿಕಾ ವಿವಾಹ ನಿಶ್ಚಿತಾರ್ಥ: ಡಾನ್ಸ್ ಮಾಡಿ ಸಂಭ್ರಮಿಸಿದ ಅಂಬಾನಿ ಕುಟುಂಬಸ್ಥರು