ಭಾವಿ ಪತ್ನಿಯೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಅನಂತ್ ಅಂಬಾನಿ: ವಿಡಿಯೋ - ಅಂಬಾನಿ ತನ್ನ ಭಾವಿ ಪತ್ನಿ ಜೊತೆಗೆ ತಿರುಪತಿಗೆ ಭೇಟಿ
ದೇಶದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರು ತಮ್ಮ ಭಾವಿ ಪತ್ನಿ ರಾಧಿಕಾ ಮರ್ಚಂಟ್ ಜೊತೆಗೆ ಇಂದು ಬೆಳಗ್ಗೆ ತಿರುಪತಿಗೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಇಬ್ಬರೂ ದೇಗುಲದಲ್ಲಿ ಅರ್ಚನ ಸೇವೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ದೇವಸ್ಥಾನದ ಅಧಿಕಾರಿಗಳು ನವ ಜೋಡಿಯನ್ನು ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದರು. ಪುರೋಹಿತರು ಪ್ರಸಾದ ನೀಡಿ ಆಶೀರ್ವದಿಸಿದರು.
Last Updated : Feb 3, 2023, 8:39 PM IST