ಕರ್ನಾಟಕ

karnataka

ತೆಲಂಗಾಣ: ನಿರ್ಮಾಣ ಹಂತದಲ್ಲಿದ್ದ ಖಾಸಗಿ ಒಳಾಂಗಣ ಕ್ರೀಡಾಂಗಣ ಕುಸಿದು 2 ಸಾವು, 10 ಮಂದಿಗೆ ಗಾಯ

ETV Bharat / videos

ತೆಲಂಗಾಣ: ಖಾಸಗಿ ಒಳಾಂಗಣ ಕ್ರೀಡಾಂಗಣ ಕುಸಿದು ಇಬ್ಬರು ಸಾವು, 10 ಮಂದಿಗೆ ಗಾಯ - ಡಿಸಿಪಿ ಜಗದೀಶ್ವರ್ ರೆಡ್ಡಿ

By ETV Bharat Karnataka Team

Published : Nov 21, 2023, 8:49 AM IST

ರಂಗಾರೆಡ್ಡಿ(ತೆಲಂಗಾಣ): ಇಲ್ಲಿನ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್‌ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಖಾಸಗಿ ಒಳಾಂಗಣ ಕ್ರೀಡಾಂಗಣ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿ, 10 ಜನರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. 

"ಪಶ್ಚಿಮ ಬಂಗಾಳ ಮತ್ತು ಬಿಹಾರದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರ ಪೈಕಿ ಓರ್ವ ವ್ಯಕ್ತಿಯ ಶವ ಹೊರತೆಗೆಯಲಾಗಿದೆ" ಎಂದು ರಾಜೇಂದ್ರನಗರ ಪೊಲೀಸ್ ಉಪ ಆಯುಕ್ತ ಜಗದೀಶ್ವರ್ ರೆಡ್ಡಿ ತಿಳಿಸಿದರು. "ಅವಶೇಷಗಳಡಿಯಿಂದ ಮತ್ತೋರ್ವನ ಮೃತದೇಹ ಹೊರತೆಗೆಯಲು ಪ್ರಯತ್ನ ನಡೆಯುತ್ತಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ರೆಡ್ಡಿ ಮಾಹಿತಿ ನೀಡಿದರು.

ಪ್ರತ್ಯೇಕ ಪ್ರಕರಣ-ಸುರಂಗದ ಒಂದು ಭಾಗ ಕುಸಿತ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಹತ್ತು ದಿನಗಳ ಹಿಂದೆ (ನವೆಂಬರ್ 12 ರಂದು) ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಂದು ಭಾಗ ಕುಸಿದಿದೆ. ಕುಸಿದಿರುವ ಸಿಲ್ಕ್ಯಾರಾ ಸುರಂಗದ ಅವಶೇಷಗಳ ಅಡಿಯಲ್ಲಿ 41 ಕಟ್ಟಡ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಿಂದ ಸಿಲುಕಿಕೊಂಡಿರುವ ಕಾರ್ಮಿಕರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರದ ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿವೆ.

ಇದನ್ನೂ ಓದಿ:ಏಳು ಜನರ ಹತ್ಯೆ ಪ್ರಕರಣ: ಮಾಫಿಯಾ ಬ್ರಿಜೇಶ್ ಸಿಂಗ್​ಗೆ ಹೈಕೋರ್ಟ್​ನಿಂದ ಬಿಗ್ ರಿಲೀಫ್

ABOUT THE AUTHOR

...view details