ಸಫಾರಿ ವಾಹನಗಳ ಮೇಲೆ ದಾಳಿಗೆ ಮುಂದಾದ ಕಾಡಾನೆ : ವಿಡಿಯೋ - ಸಫಾರಿ ವಾಹನಗಳ ಮೇಲೆ ದಾಳಿಗೆ ಮುಂದಾದ ಕಾಡಾನೆ
Published : Sep 11, 2023, 8:16 PM IST
ಮೈಸೂರು: ಸಫಾರಿ ವಾಹನಗಳ ಮೇಲೆ ಕಾಡಾನೆಯೊಂದು ದಾಳಿಗೆ ಮುಂದಾಗಿರುವ ಘಟನೆ ಜಿಲ್ಲೆಯ ನಾಗರಹೊಳೆ ಅರಣ್ಯದಲ್ಲಿ ನಡೆದಿದೆ. ಇಲ್ಲಿನ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕುಟ್ಟ ರಸ್ತೆಯಲ್ಲಿ ಕಾಡಾನೆ ದಾಳಿಗೆ ಯತ್ನಿಸಿದೆ. ಈ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲಿನಲ್ಲಿ ಸೆರೆಯಾಗಿದೆ.
ಈ ವಿಡಿಯೋದಲ್ಲಿ ರಸ್ತೆ ಬದಿಯಲ್ಲಿದ್ದ ಆನೆ ಏಕಾಏಕಿ ಮುಂದಿನಿಂದ ಬರುತ್ತಿದ್ದ ಸಫಾರಿ ವಾಹನದ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಸಫಾರಿ ವಾಹನದ ಚಾಲಕ ವಾಹನವನ್ನು ಹಿಂದಕ್ಕೆ ಚಲಾಯಿಸಿದ್ದಾರೆ. ಈ ವೇಳೆ ಆನೆಯು ಸ್ವಲ್ಪ ದೂರ ಅಟ್ಟಿಸಿಕೊಂಡು ಹೋಗಿ ವಾಪಸ್ ಮರಳಿದೆ. ಈ ವೇಳೆ ಇನ್ನೊಂದು ಕಡೆಯಿಂದ ಬರುತ್ತಿದ್ದ ಸಫಾರಿ ವಾಹನವನ್ನು ಕಾಡಾನೆ ನೋಡಿದೆ.
ಈ ವಾಹನಕ್ಕೂ ಆನೆಯು ದಾಳಿ ನಡೆಸಲು ಮುಂದಾಗಿದ್ದು, ಚಾಲಕ ವಾಹನವನ್ನು ಹಿಂದಕ್ಕೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ಆನೆಯು ವಾಹನವನ್ನು ಅಟ್ಟಿಸಿಕೊಂಡು ಬಂದಿದ್ದು, ಪ್ರವಾಸಿಗರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಈ ವೇಳೆ ವಾಹನದಲ್ಲಿದ್ದ ಪ್ರವಾಸಿಗರು ಗಾಬರಿಗೊಂಡಿದ್ದಾರೆ. ಬಳಿಕ ಆನೆ ತನ್ನ ಪಾಡಿಗೆ ಕಾಡಿಗೆ ತೆರಳಿದೆ.
ಇದನ್ನೂ ಓದಿ :Watch... ಮದ್ಯದಂಗಡಿಗೆ ಲಗ್ಗೆ ಇಟ್ಟ ಗಜರಾಜನ ಪಡೆ.. ಮದ್ಯಪ್ರಿಯರು ಚೆಲ್ಲಾಪಿಲ್ಲಿ