ಶತಮಾನದ ಸಂತನಿಗೆ ರಂಗೋಲಿ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಹುಬ್ಬಳ್ಳಿಯ ಕಲಾವಿದ - ಕಂಬನಿ ಮೀಡಿದು ಶ್ರದ್ಧಾಂಜಲಿ ಅರ್ಪಣೆ
ಅಗಲಿದ ಆಧ್ಯಾತ್ಮದ ಗುರು ವಿಜಯಪುರದ ಸಿದ್ದೇಶ್ವರ ಶ್ರೀಗಳಿಗೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಸಂತಾಪ ವ್ಯಕ್ತವಾಗುತ್ತಿದೆ. ಶತಮಾನದ ಸಂತನಿಗೆ ಅದೆಷ್ಟೋ ಜನರು ವಿವಿಧ ರೀತಿಯಲ್ಲಿ ಕಂಬನಿ ಮಿಡಿದು ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ. ಹುಬ್ಬಳ್ಳಿಯ ಕಲಾವಿದರೊಬ್ಬರು ತಮ್ಮ ಕಲೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ. ದಿನೇಶ ಚಿಲ್ಲಾಳ ಎಂಬ ಕಲಾವಿದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರವನ್ನು ರಂಗೋಲಿಯಲ್ಲಿ ಚಿತ್ರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
Last Updated : Feb 3, 2023, 8:38 PM IST