ಕರ್ನಾಟಕ

karnataka

ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ ಜ್ಞಾನೇಂದ್ರ

ETV Bharat / videos

ಅಪಘಾತದಲ್ಲಿ ಬೈಕ್ ಸವಾರನಿಗೆ ತೀವ್ರ ಗಾಯ.. ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಾಸಕ ಆರಗ ಜ್ಞಾನೇಂದ್ರ - ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಕನ್ನಂಗಿ ರಸ್ತೆ

By

Published : May 21, 2023, 7:26 PM IST

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಕನ್ನಂಗಿ ರಸ್ತೆಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರನೊಬ್ಬ ತೀವ್ರ ಗಾಯಗೊಂಡಿದ್ದನು. ಅದೇ ಮಾರ್ಗದಲ್ಲಿ ಹೊರಟಿದ್ದ ಮಾಜಿ ಗೃಹ ಸಚಿವ ಶಾಸಕ ಆರಗ ಜ್ಞಾನೇಂದ್ರ ಅವರು ಅಪಘಾತ ಆಗಿದ್ದನ್ನು ಗಮನಿಸಿ, ತಕ್ಷಣ ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಗಾಯಾಳು ಬೈಕ್ ಸವಾರ್​​ ಆಸ್ಪತ್ರೆಗೆ ರವಾನೆ..ಬೆಜ್ಜವಳ್ಳಿಯಿಂದ ಕನ್ನಂಗಿಗೆ ಕಡೆಗೆ ಬೈಕ್​ ಸವಾರನು ಹೊರಟಿದ್ದನು. ಆಕಸ್ಮಿಕವಾಗಿ ರಸ್ತೆಯಲ್ಲಿ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿದ್ದನು. ಇದೇ ಮಾರ್ಗವಾಗಿ ಬೆಜ್ಜವಳ್ಳಿಯಿಂದ ಕೋಣಂದೂರು ತೆರಳುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ ಅವರು ಅಪಘಾತ ಆಗಿರುವುದನ್ನು ಗಮನಿಸಿದ ತಕ್ಷಣ ವಾಹನ ನಿಲ್ಲಿಸಿ ಗಾಯವಾಗಿದ್ದ ಬೈಕ್​ ಸವಾರನನ್ನು ಸಂತೈಸಿದರು.

ಗಾಯಾಳುವಿಗೆ ಕುಡಿಯುವ ನೀರನ್ನು ನೀಡಿ ಧೈರ್ಯ ತುಂಬಿದ್ದಾರೆ. ಅಷ್ಟರಲ್ಲಿ ಸ್ಥಳೀಯರು 108ಕ್ಕೆ ಕರೆ ಮಾಡಿದ್ದಾರೆ. ಆರಗ ಜ್ಞಾನೇಂದ್ರ ಅವರು ತಮ್ಮದೆ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರಿ ನಡೆಸುತ್ತಿದ್ದಾಗ, ಅಷ್ಟರಲ್ಲೇ 108  ಆಂಬ್ಯುಲೆನ್ಸ್ ಬಂದಿತು. ಆಂಬುಲೆನ್ಸ್ ನಲ್ಲಿ ಗಾಯಾಳುವನ್ನು ಕಳಿಸಿಕೊಟ್ಟು ಬೈಕ್ ಸವಾರನ ಜೀವ ಉಳಿಸುವಲ್ಲಿ ಶ್ರಮಿಸಿದರು.

ನಂತರ ತಮ್ಮ ಕೋಣಂದೂರು ಪ್ರಯಾಣ ಮುಂದುವರೆಸಿದ್ದಾರೆ. ಈ ಪ್ರಯಾಣದ ನಡುವೆ ಗಾಯಾಳುವನ್ನು ಸಂತೈಸಿದ ಆರಗ ಜ್ಞಾನೇಂದ್ರ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂಓದಿ :ಮಹಿಳೆ ಮೇಲೆ ದಾಳಿ ಮಾಡಿದ್ದ ಚಿರತೆ ಸಾವು.. ಅರಣ್ಯಾಧಿಕಾರಿಗಳಿಗೆ ಜನ ಹೇಳಿದ್ದೇನು?

ABOUT THE AUTHOR

...view details