ಕರ್ನಾಟಕ

karnataka

ETV Bharat / videos

ಹೈವೋಲ್ಟೇಜ್​ ವಿದ್ಯುತ್​ ತಂತಿ ತಗುಲಿ 11 ವರ್ಷದ ಬಾಲಕ ಸಾವು.. - Etv bharat Kannada

By

Published : Jan 28, 2023, 3:47 PM IST

Updated : Feb 3, 2023, 8:39 PM IST

ಮೊಗ (ಪಂಜಾಬ್​): ಹೈವೋಲ್ಟೇಜ್ ವಿದ್ಯುತ್ ತಂತಿ ತಗುಲಿ 11 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಲವೀಶ್​ (11) ಮೃತ ಬಾಲಕ. ಜ.15 ರಂದು ಸಂಜೆ ವೇಳೆ ಮನೆಯ ಮೇಲೆ ಹಾದು ಹೋಗಿದ್ದ ಹೈವೋಲ್ಟೇಜ್​ ವಿದ್ಯುತ್​ ತಂತಿ ತಗುಲಿ ಲವೀಶ್​ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಸ್ಥಳೀಯ ಆಸ್ಪತ್ರೆಗೆ ಲವೀಶ್​ನನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 13 ದಿನಗಳಿಂದ ಜೀವನ್ಮರಣದ ಹೋರಾಟ ನಡೆಸಿದ ಬಾಲಕ ಇಂದು ಕೊನೆಯುಸಿರೆಳೆದಿದ್ದಾನೆ. 

ಘಟನೆ ಕುರಿತು ವಿದ್ಯುತ್​ ಸರಬರಾಜು ಇಲಾಖೆ ಮತ್ತು ಆಡಳಿತದ ವಿರುದ್ದ ಜನರು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಬಗ್ಗೆ ಉಪ ಮೇಯರ್​ ಅಶೋಕ್​ ಧಮಿಜ ಎಂಬುವವರು ಕೂಡ ಪ್ರತಿಕ್ರಿಯೆ ನೀಡಿದ್ದು, ಮನೆಯ ಮೇಲೆ ಹಾದು ಹೋಗಿರುವ ಹೈವೋಲ್ಟೇಜ್​ ತಂತಿಗಳ ಬಗ್ಗೆ ಜಾಗ್ರತೆ ವಹಿಸುವಂತೆ ಅನೇಕ ಬಾರಿ ಜಿಲ್ಲಾಡಳಿತ ಮತ್ತು ವಿದ್ಯುತ್​ ಇಲಾಖೆಗೆ ಪತ್ರೆ ಬರೆದಿದ್ದೇನೆ ಆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇವುಗಳ ನಿರ್ಲಕ್ಷದಿಂದ ಇಂದು ಲವೀಶ್​ ಎನ್ನುವ ಬಾಲಕ ಬಲಿಯಾಗಿದ್ದಾನೆ. ಇನ್ನಾದರೂ ವಿದ್ಯುತ್​ ಇಲಾಖೆ ಎಚ್ಚೆತ್ತುಕೊಂಡು ಕೂಡಲೇ ಇದಕ್ಕೆ ಪರಿಹಾರ ಕಂಡುಕೊಂಡು ಮುಂದಾಗುವಂತಹ ಅನಾಹುತಗಳನ್ನು ತಡೆಯಬೇಕು ಎಂದು ತಿಳಿಸಿದರು. ಇನ್ನು ಇಂದು ಸ್ಥಳೀಯ ಮುಕ್ತಿಧಾಮದಲ್ಲಿ ಬಾಲಕನ ಅಂತ್ಯಕ್ರಿಯೆ ಮಾಡಲಾಯಿತು.

ಇದನ್ನೂ ಓದಿ:ಗಣರಾಜ್ಯೋತ್ಸವದಂದೇ 17 ಪಾಕಿಸ್ತಾನಿ ಕೈದಿಗಳ ಬಿಡುಗಡೆ 

Last Updated : Feb 3, 2023, 8:39 PM IST

ABOUT THE AUTHOR

...view details