ಆಂಜನೇಯಗೆ ಬೆಳ್ಳಿಯ ನವರತ್ನಯುಕ್ತ ಗದೆ ಸಮರ್ಪಣೆ ಮಾಡಿದ ಅಮಿತ್ ಶಾ - ಆಂಜನೇಯಗೆ ಬೆಳ್ಳಿಯ ನವರತ್ನಯುಕ್ತ ಗದೆ ಸಮರ್ಪಣೆ
ದಕ್ಷಿಣ ಕನ್ನಡ: ಇಲ್ಲಿಯ ಈಶ್ವರಮಂಗಲದ ಹನುಮಗಿರಿಯ ಸುಪ್ರಸಿದ್ಧ ಆಂಜನೇಯ ದೇವಸ್ಥಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಆಂಜನೇಯ ದೇವರಿಗೆ ನವರತ್ನ ಖಚಿತ ಬೆಳ್ಳಿಯ ಗದೆಯನ್ನು ಸಮರ್ಪಣೆ ಮಾಡಿದರು. ಬಳಿಕ ಅರ್ಚಕರು ಶಾ ಅವರಿಗೆ ರಕ್ಷೆ ಕಟ್ಟಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದರಾದ ನಳೀನ್ ಕುಮಾರ್ ಕಟೀಲ್ ಧರ್ಮಶ್ರೀ ಪ್ರತಿಷ್ಠಾನದ ಪ್ರಮುಖರು, ಇತರರು ಉಪಸ್ಥಿತರಿದ್ದರು.
ಇನ್ನು ಅಮರಗಿರಿಯಲ್ಲಿ ಧರ್ಮಶ್ರೀ ಪ್ರತಿಷ್ಠಾನ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಭಾರತಿ ಅಮರಜ್ಯೋತಿ ಮಂದಿರ ಥೀಮ್ ಪಾರ್ಕ್ನ್ನು ಅಮಿತ್ ಶಾ ಅವರು ಲೋಕಾರ್ಪಣೆ ಮಾಡಿದರು. ಬಳಿಕ ಭಾರತ ಮಾತೆಗೆ, ಸೈನಿಕರಿಗೆ ಪುಷ್ಪಾರ್ಚನೆ ಮಾಡಿ ಸಂದರ್ಶಕರ ಪುಸ್ತಕದಲ್ಲಿ ಅಮರಗಿರಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಬರೆದರು.
ಇದನ್ನೂ ಓದಿ:ಮಂಗಳೂರಲ್ಲಿ ಅಮಿತ್ ಶಾ ರೋಡ್ ಶೋ : ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದ ಸಚಿವರು