ಚುನಾವಣಾ ಚಾಣಕ್ಯನ ರೋಡ್ ಶೋಗೆ ಅಮಿತ್ ಶಾ ಟ್ಯಾಟು ಹಾಕಿಸಿಕೊಂಡು ಬಂದ ಅಭಿಮಾನಿ - ಅಮಿತ್ ಶಾ ಟ್ಯಾಟು ಹಾಕಿಸಿಕೊಂಡು ಬಂದ ಅಭಿಮಾನಿ
ಚಾಮರಾಜನಗರ:ಚುನಾವಣಾ ಪ್ರಚಾರಕ್ಕಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣಕ್ಕೆ ಅಮಿತ್ ಷಾ ಆಗಮಿಸುತ್ತಿದ್ದು, ಕೆಲವೇ ಕ್ಷಣಗಳಲ್ಲಿ ರೋಡ್ ಶೋ ಆರಂಭಗೊಳ್ಳಲಿದೆ. ಚುನಾವಣಾ ಚಾಣಕ್ಯನ ಅಭಿಮಾನಿ ಟಿ. ನರಸೀಪುರದ ಸಿದ್ದು ಎಂಬವರು ಹುಲಿ ಹಾಗೂ ಅಮಿತ್ ಷಾ ಅವರ ಹಚ್ಚೆ ಹಾಕಿಸಿಕೊಂಡು ಗಮನ ಸೆಳೆಯುತ್ತಿದ್ದಾರೆ. ಕಾಶ್ಮೀರದ ವಿಶೇಷ ಪ್ರಾತಿನಿಧ್ಯ ತೆಗೆದಿರುವುದು, ಗುಂಡ್ಲುಪೇಟೆಗೆ ಬರುತ್ತಿರುವ ದ್ಯೋತಕವಾಗಿ ಈ ಟ್ಯಾಟು ಉಡುಗೊರೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಮೈಸೂರು ಚಾಮುಂಡಿ ದೇವಿಯ ದರ್ಶನ ಪಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಸರಿಮಯವಾಗಿರುವ ಗುಂಡ್ಲುಪೇಟೆ: ಚುನಾವಣೆ ಹಿನ್ನೆಲೆ ಗುಂಡ್ಲುಪೇಟೆಗೆ ಆಗಮಿಸಿರುವ ಅಮಿತ್ ಶಾ ರೋಡ್ ಶೋ ನಡೆಸುತ್ತಿದ್ದಾರೆ. ಇವರ ಆಗಮನ ಹಿನ್ನೆಲೆ ಇಡೀ ಗುಂಡ್ಲುಪೇಟೆ ಕೇಸರಿ ಬಣ್ಣದ ಶಾಲು, ಧ್ವಜದಿಂದ ರಾರಾಜಿಸುತ್ತಿದೆ. ಇನ್ನು ವೃದ್ಧರೊಬ್ಬರು ಬಿಜೆಪಿ ಬಾವುಟ ಹಿಡಿದು ರಸ್ತಯೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ:ನಾಳೆ ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಆಗಮನ; ಮೈಸೂರು ಜಿಲ್ಲೆಯಲ್ಲಿ ಭರ್ಜರಿ ಪ್ರಚಾರ
ಇದನ್ನೂ ಓದಿ:ಸಿದ್ದಗಂಗಾ ಮಠದ ನೂತನ ಉತ್ತರಾಧಿಕಾರಿಗಳಿಗೆ ಗೌರವ ಸಮರ್ಪಿಸಿದ ಮುಖ್ಯಮಂತ್ರಿ ಬೊಮ್ಮಾಯಿ