ಸಪ್ತಸಾಗರ ದಾಟಿ ಬಂದು ಭಾರತದ ಯವಕನೊಂದಿಗೆ ಸಪ್ತಪದಿ ತುಳಿದ ಅಮೆರಿಕದ ವೈದ್ಯೆ - ಭಾರತದ ಯವಕನೊಂದಿಗೆ ವಿವಾಹವಾದ ಅಮೆರಿಕ ವೈದ್ಯೆ
ತೆಹ್ರಿ(ಉತ್ತರಾಖಂಡ): ಅಮೆರಿಕದ ವೈದ್ಯೆಯೊಬ್ಬರು ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ ಭಾರತಕ್ಕೆ ಬಂದು ಉತ್ತರಾಖಂಡದ ಯುವಕನೊಂದಿಗೆ ವಿವಾಹವಾಗಿ ಗಮನಸೆಳೆದಿದ್ದಾರೆ. ಅಮೆರಿಕದ ವೈದ್ಯೆ ಫ್ರೆಂಚ್ಸ್ಕಾ ಎನ್ನುವವರು ತೆಹ್ರಿಯ ಅರಕೋಟ್ ನಿವಾಸಿ ವಿಕಾಸ್ ಎನ್ನುವವರನ್ನು ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ವಿಕಾಸ್ ಅಮೆರಿಕದ ಹೋಟೆಲ್ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಭಾರತೀಯ ಮೂಲದ ವಿಕಾಸ್ಗೆ ಅಮೆರಿಕದ ವೈದ್ಯೆ ಫ್ರೆಂಚ್ಸ್ಕಾ ಎಂಬುವವರ ಪರಿಚಯವಾಗುತ್ತದೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯುತ್ತೆ. ನಂತರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸುತ್ತಾರೆ. ಅದರಂತೆ ಈ ಜೋಡಿ ಭಾರತಕ್ಕೆ ಬಂದು ಹಿಂದೂ ಸಂಪ್ರದಾಯದಂತೆ ನ.16ರಂದು ತೆಹ್ರಿಯಲ್ಲಿ ವಿವಾಹವಾಗುತ್ತಾರೆ. ಇನ್ನೂ ವಿವಾಹ ಸಂದರ್ಭದಲ್ಲೂ ಫ್ರೆಂಚ್ಸ್ಕಾ ಉತ್ತರಾಖಂಡಿನ ನತುಲಿ ಉಡುಪು ಧರಿಸಿದ್ದರು. ಮದುವೆಗೆಂದು ಫ್ರೆಂಚ್ಸ್ಕಾ ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ಭಾರತಕ್ಕೆ ಬಂದಿದ್ದರು. ವಿವಾಹದ ಬಳಿಕ ಜೋಡಿ ಮರಳಿ ಅಮೆರಿಕಕ್ಕೆ ಹಾರಿವೆ.
Last Updated : Feb 3, 2023, 8:33 PM IST