ತಳ್ಳುವ ಗಾಡಿ ಐಸಾ.. ನಿಂತಿದ್ದ ಸರ್ಕಾರಿ ಆಂಬ್ಯುಲೆನ್ಸ್ ತಳ್ಳಿದ ಜನ: ವಿಡಿಯೋ ವೈರಲ್ - ambulance
ಲಕ್ನೋ (ಉತ್ತರ ಪ್ರದೇಶ): ಚಲಿಸದೆ ನಿಂತಿದ್ದ ಸರ್ಕಾರಿ ಆಂಬ್ಯುಲೆನ್ಸ್ ಅನ್ನು ಸಾರ್ವಜನಿಕರು ತಳ್ಳುತ್ತಿರುವ ದೃಶ್ಯ ಉತ್ತರ ಪ್ರದೇಶದ ಲಕ್ನೋದ ಬಕ್ಷಿ ಕಾ ತಾಲಾಬ್ ಪ್ರದೇಶದ ಕುಮ್ಹರಾವಾ ರಸ್ತೆಯಲ್ಲಿ ಮಂಗಳವಾರ ಕಂಡುಬಂದಿದೆ. ಅಲ್ಲದೇ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಪೆಟ್ರೋಲ್ ಬಂಕ್ನಲ್ಲಿ ಡಿಸೇಲ್ ಹಾಕಿಸಿದ ಬಳಿಕವೂ ಆಂಬ್ಯುಲೆನ್ಸ್ ಚಲಿಸಲಿಲ್ಲ. ಬಳಿಕ ಅಲ್ಲಿಂದ ಸಾರ್ವಜನಿಕರು ಅದನ್ನು ತಳ್ಳಿದ್ದಾರೆ. ಬಳಿಕ ಅದು ಪ್ರಾರಂಭವಾಗಿದೆ. ಇದೇ ವೇಳೆ ಅಲ್ಲಿದ್ದ ಕೆಲವರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಆಂಬ್ಯುಲೆನ್ಸ್ ಈ ಹಿಂದೆಯೂ ಹಲವು ಬಾರಿ ಕೆಟ್ಟು ನಿಂತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
Last Updated : Feb 3, 2023, 8:36 PM IST