ಮೂಡಿಗೆರೆಯ ಟ್ರಾಫಿಕ್ನಲ್ಲಿ ಸಿಲುಕಿ ಪರದಾಡಿದ ಆ್ಯಂಬುಲೆನ್ಸ್ - ಈಟಿವಿ ಭಾರತ್ ಕನ್ನಡ ಸುದ್ದಿ
ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಆ್ಯಂಬುಲೆನ್ಸ್ ಪರದಾಟ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ. ಮೂಡಿಗೆರೆ ಹೊರವಲಯದ ರೈತ ಭವನ ಬಳಿ ಸಂಚಾರ ಅಸ್ತವ್ಯಸ್ತವಾಗಿದೆ. ಮದುವೆ ಹಿನ್ನೆಲೆ ರಸ್ತೆಯ ಪಕ್ಕ ಅಡ್ಡಾ ದಿಡ್ಡಿ ಪಾರ್ಕಿಂಗ್ ಮಾಡಲಾಗಿದ್ದು, ಸುಮಾರು 2 ಕಿಲೋಮೀಟರ್ ದೂರ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಟ ನಡೆಸಿದ್ದು, ಸಂಚಾರ ದಟ್ಟಣೆ ಏರ್ಪಟ್ಟು ರೈತ ಭವನದ ಸಿಬ್ಬಂದಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚಾರ ಅಸ್ತವ್ಯಸ್ತ ಆಗಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
Last Updated : Feb 3, 2023, 8:31 PM IST