ಕರ್ನಾಟಕ

karnataka

ETV Bharat / videos

ಅಮರ್ತ್ಯ ಸೇನ್ ತಾಲಿಬಾನಿಗಳಿಗೆ ಸಲಹೆ ನೀಡಲಿ: ಸುವೇಂದು ಅಧಿಕಾರಿ ತಿರುಗೇಟು - ETV Bharath Kannada news

By

Published : Jan 18, 2023, 10:56 PM IST

Updated : Feb 3, 2023, 8:39 PM IST

ಮಿಡ್ನಾಪುರ(ಪಶ್ಚಿಮ ಬಂಗಾಳ):ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಆಗಾಗ ಟೀಕಿಸುತ್ತಿರುತ್ತಾರೆ. ಇತ್ತೀಚೆಗೆ ಮಮತಾ ಬ್ಯಾನರ್ಜಿ ಅವರಿಗೆ ದೇಶದ ಮುಂದಿನ ಪ್ರಧಾನಿಯಾಗುವ ಸಾಮರ್ಥ್ಯವಿದೆ. ನರೇಂದ್ರ ಮೋದಿ ಇನ್ನು ಮುಂದೆ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದರು. ಇದಕ್ಕೆ ಬಹಳಷ್ಟು ಪರ ವಿರೋಧ ಚರ್ಚೆಗಳೂ ಆಗಿದ್ದವು. 

ಇಂದು ಪೂರ್ವ ಮಿಡ್ನಾಪುರದ ಎಗ್ರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಪಕ್ಷ ನಾಯಕ ಸುವೇಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ವಿದೇಶದಲ್ಲಿರಬೇಕು. ವಿಶ್ರಾಂತಿಯಲ್ಲಿರಿ, ಮೋದಿಜಿ ನೇತೃತ್ವದಲ್ಲಿ ದೇಶ ಚೆನ್ನಾಗಿಯೇ ಮುನ್ನಡೆಯುತ್ತಿದೆ. ನೀವು ಏನಾದರೂ ಸಲಹೆ ನೀಡಬೇಕಾದರೆ, ಅದನ್ನು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಅಥವಾ ಉಕ್ರೇನ್‌ನ ಝೆಲೆನ್ಸ್‌ಕಿಗೆ ನೀಡಿ. ಚುನಾವಣೆಗೆ ಒಂದೂವರೆ ವರ್ಷ ಮೊದಲು ಅಮರ್ತ್ಯಬಾಬಾ ಈ ಭವಿಷ್ಯ ನುಡಿದಿದ್ದಾರೆ. 400ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದು ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ ಎಂದು ಸುವೇಂದು ಅಧಿಕಾರಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ಕೇಂದ್ರದ ವಿರುದ್ಧ ಹೋರಾಡಲು ಕೆಸಿಆರ್ ರೆಡಿ: ಬಿಎಸ್​​ಆರ್​​​​​​​​​​​ ಬೃಹತ್​ ಸಭೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ಘೋಷಣೆ

Last Updated : Feb 3, 2023, 8:39 PM IST

ABOUT THE AUTHOR

...view details