ಕರ್ನಾಟಕ

karnataka

ETV Bharat / videos

ಭಾರತ್​ ಜೋಡೋಗೆ ಫಾರೂಕ್​ ಅಬ್ದುಲ್ಲಾ, ಮೆಹಬೂಬ್​ ಮುಫ್ತಿ ಸಾಥ್​: ಮಾಫಿ ಮಾಂಗೋ ಯಾತ್ರೆ ಎಂದು ಬಿಜೆಪಿ ನಾಯಕರ ಲೇವಡಿ..! - Etv bharat Kannada

By

Published : Jan 28, 2023, 4:53 PM IST

Updated : Feb 3, 2023, 8:39 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ರಾಹುಲ್​ ಗಾಂಧಿ ನೇತೃತ್ವದ ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಅಂತಿಮ ಹಂತ ತಲುಪಿದೆ. ಇಂದು ಕಾಶ್ಮೀರ ಕಣಿವೆಯಲ್ಲಿ ಸಾಗಿದ ಯಾತ್ರೆಯಲ್ಲಿ ಪಕ್ಷದ ಸ್ಥಳೀಯ ನಾಯಕರಾದ ಡಾ.ಫಾರೂಕ್​ ಅಬ್ದುಲ್ಲಾ, ಉಮರ್​ ಅಬ್ದುಲ್ಲಾ, ತಾರಿಕ್​ ಅಹ್ಮದ್​ ಕರ್ರಾ ಮತ್ತು ಪಿಡಿಪಿಯ ಮೆಹಬೂಬಾ ಮುಫ್ತಿ ಪಾಲ್ಗೊಂಡರು.  ಯಾತ್ರೆಯಲ್ಲಿ ರಾಹುಲ್​​ ಜೊತೆ ಹೆಜ್ಜೆಹಾಕಿ ಬೆಂಬಲ ನೀಡಿದರು. 

ಕಾಶ್ಮೀರದಲ್ಲಿ ಭಾರತ ಜೋಡೋ ಮುಂದುವರೆದಿರುವಂತೆ,  ಸ್ಥಳೀಯ ಬಿಜೆಪಿ ನಾಯಕ ಅಲ್ತಾಫ್​ ಠಾಕೂರ್, ಭಾರತ್​ ಜೋಡೋ ಯಾತ್ರೆಯನ್ನು 'ಮಾಫಿ ಮಾಂಗೋ ಯಾತ್ರೆ' ಎಂದು ಟೀಕಿಸಿದ್ದಾರೆ. ಕಣಿವೆಯ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ, ಅಲ್ಲದೇ ಖಾಲಿ ಪಾತ್ರೆಗಳು ಹೆಚ್ಚು ಶಬ್ದವನ್ನು ಮಾಡುತ್ತವೆ ಎಂದು ಲೇವಡಿ ಮಾಡಿದ್ದಾರೆ. ಇಲ್ಲಿ ನಡೆಯುತ್ತಿರುವ ಜೋಡೋ ಯಾತ್ರೆಯಲ್ಲಿ ಕೇವಲ ಕಾಂಗ್ರೆಸ್​ ಮಾತ್ರವಲ್ಲದೇ ಅದರಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಕೂಡ ಭಾಗಿಯಾಗಿದೆ.  

ಕಾಶ್ಮೀರದ ಕಣಿವೆಯಲ್ಲಿ ಕಾಂಗ್ರೆಸ್‌ ಪಕ್ಷದ ಬಲ ಸಂಪೂರ್ಣವಾಗಿ ನೆಲಕಚ್ಚಿದೆ. ಅದಕ್ಕಾಗಿ ಇತರ ಪಕ್ಷಗಳ ಬೆಂಬಲವನ್ನು ಕಾಂಗ್ರೆಸ್​ ಬಯಸುತ್ತಿದೆ ಎಂದು ಅವರು ಲೇವಡಿ ಮಾಡಿದ್ದಾರೆ. ಇನ್ನು ಯಾತ್ರೆಯಲ್ಲಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ಜಾ ಮುಫ್ತಿ ಕೂಡ ಭಾಗಿಯಾಗಿದ್ದರು.

ಇದನ್ನೂ ಓದಿ:  ಹೈವೋಲ್ಟೇಜ್​ ವಿದ್ಯುತ್​ ತಂತಿ ತಗುಲಿ 11 ವರ್ಷದ ಬಾಲಕ ಸಾವು..

Last Updated : Feb 3, 2023, 8:39 PM IST

ABOUT THE AUTHOR

...view details