ಕರ್ನಾಟಕ

karnataka

ಪ್ರಧಾನಿ ನರೇಂದ್ರ ಮೋದಿ

ETV Bharat / videos

ವಿಮಾನಗಳಿಂದ ಆಕಾಶದಲ್ಲಿ 'ವೆಲ್​ಕಮ್​ ಮೋದಿ'; ಸಿಡ್ನಿಯಲ್ಲಿ ವಿಶೇಷ ಸ್ವಾಗತ- ವಿಡಿಯೋ - PM Modi Australia tour

By

Published : May 23, 2023, 1:10 PM IST

ಸಿಡ್ನಿ (ಆಸ್ಟ್ರೇಲಿಯಾ): ವಿಶ್ವದ ಪ್ರಭಾವಿ ಮತ್ತು ಜನಪ್ರಿಯ ವ್ಯಕ್ತಿಗಳಲ್ಲಿ ನಂಬರ್​ 1 ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದೇಶಗಳ ಪ್ರವಾಸದಲ್ಲಿದ್ದು, ಇದೀಗ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದಾರೆ. ಮೋದಿ ಅವರ ಆಗಮನದಿಂದ ಉಲ್ಲಸಿತವಾಗಿರುವ ಅಲ್ಲಿನ ಸರ್ಕಾರ ಭಾರತದ ಪ್ರಧಾನಿಗೆ ವಿಶೇಷ ರೀತಿಯಲ್ಲಿ ಸ್ವಾಗತ ಕೋರಿದೆ. ಸಿಡ್ನಿಯಲ್ಲಿ ಭಾರತೀಯರ ಸಮುದಾಯ ಜೊತೆಗಿನ ಕಾರ್ಯಕ್ರಮಕ್ಕೂ ಮುನ್ನ ಮನರಂಜನಾ ವಿಮಾನಗಳ ಮೂಲಕ ಆಕಾಶದಲ್ಲಿ ‘ವೆಲ್‌ಕಮ್ ಮೋದಿ’ ಎಂದು ಬರೆಯುವ ಮೂಲಕ ವಿಶೇಷವಾಗಿ ಸ್ವಾಗತ ಕೋರಲಾಗಿದೆ.

ಭಾರತೀಯರ ಜೊತೆ ಸಂವಾದ:ಮೋದಿ ಅವರು ಆಸ್ಟ್ರೇಲಿಯಾದಲ್ಲಿ ಮೂರು ದಿನ ಉಳಿಯಲಿದ್ದು, ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದಲ್ಲದೇ, ವಲಸಿಗ ಭಾರತೀಯರ ಜೊತೆಗೂ ಸಂವಾದ ನಡೆಸಲಿದ್ದಾರೆ. ಪರಮಟ್ಟ ಎಂಬಲ್ಲಿರುವ ಹ್ಯಾರಿಸ್ ಪಾರ್ಕ್ ಪ್ರದೇಶಕ್ಕೆ 'ಲಿಟಲ್ ಇಂಡಿಯಾ' ಎಂದು ಘೋಷಣೆ ಮಾಡಲಿದ್ದಾರೆ. ಹ್ಯಾರಿಸ್ ಪಾರ್ಕ್ ಪ್ರದೇಶದಲ್ಲಿ ಭಾರತೀಯ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ನೆಲೆಯೂರಿದೆ. ಈ ಪ್ರದೇಶ ಭಾರತೀಯರ ಒಡೆತನದಲ್ಲಿದೆ. ಹೀಗಾಗಿ ಈ ಪ್ರದೇಶವನ್ನು ಅನೌಪಚಾರಿಕವಾಗಿ 'ಲಿಟಲ್ ಇಂಡಿಯಾ' ಎಂದು ಕರೆಯಲಾಗುತ್ತದೆ. 

ಇದನ್ನೂ ಓದಿ:ಭಾರತ- ಆಸ್ಟ್ರೇಲಿಯಾ 'ಮುಕ್ತ' ಸಂಬಂಧಗಳ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

ABOUT THE AUTHOR

...view details