ಕರ್ನಾಟಕ

karnataka

ETV Bharat / videos

ಕೆಸರು ಗದ್ದೆಯಲ್ಲಿ ಚಿಣ್ಣರಾಟ: ರೈತ ದಿನಕ್ಕಾಗಿ ಪುಟಾಣಿಗಳಿಗೆ ಕೃಷಿ ಪಾಠ - ರೈತ ದಿನಾಚರಣೆ ಅಂಗವಾಗಿ

By

Published : Dec 26, 2022, 5:40 PM IST

Updated : Feb 3, 2023, 8:37 PM IST

ಗಂಗಾವತಿ: ಮಣ್ಣು, ಕಲ್ಲು, ಕೆಸರಿನೊಂದಿಗೆ ಆಟವಾಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಹರುಷ. ಇಂಥದ್ದೊಂದು ಅವಕಾಶವನ್ನು ಕಾರಟಗಿಯ ಶಾರದಾ ಇಂಟರ್‌ನ್ಯಾಷನ್‌ ಸ್ಕೂಲಿನ ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಗೆ ಕಲ್ಪಿಸಿಕೊಟ್ಟರು. ರೈತ ದಿನಾಚರಣೆ ಪ್ರಯುಕ್ತ 1ರಿಂದ 5ನೇ ತರಗತಿಯ ಚಿಣ್ಣರನ್ನು ನೇರವಾಗಿ ಗದ್ದೆಗಳ ಕೆಸರಿಗಿಳಿಸಿದ ಅವರು ನಾಟಿ ಮಾಡುವಂತೆ ಪ್ರೇರೇಪಿಸಿದರು. ಕೆಲವು ಮಕ್ಕಳು ಶಿಕ್ಷಕರು ಹೇಳಿದಂತೆ ನಾಟಿ ಕಾರ್ಯಕ್ಕೆ ಮುಂದಾದರೆ, ಇನ್ನೂ ಕೆಲವು ಮಕ್ಕಳು ಶಿಕ್ಷಕರ ನಿರ್ದೇಶನಗಳನ್ನು ಗಾಳಿಗೆ ತೂರಿ ತಮಗಿಷ್ಟದಂತೆ ಕೆಸರನಲ್ಲಿ ಆಟವಾಡಿದರು. ಗಂಡು ಮಕ್ಕಳು ತಲೆಗೆ ಮುಂಡಾಸು, ಪಂಚೆಯುಟ್ಟರೆ; ಹೆಣ್ಣು ಮಕ್ಕಳು ಸೀರೆಯುಟ್ಟು ಕೆಸರು ಗದ್ದೆಗಿಳಿದು ಖುಷಿಪಟ್ಟರು.
Last Updated : Feb 3, 2023, 8:37 PM IST

ABOUT THE AUTHOR

...view details