ಕೇರಳದಲ್ಲಿ ಹೆಚ್ಚಾದ ಹಂದಿ ಜ್ವರ: ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ, ಪ್ರತಿ ವಾಹನಕ್ಕೆ ಸ್ಯಾನಿಟೈಸ್ - ಹಂದಿ ಜ್ವರ
Published : Sep 5, 2023, 12:50 PM IST
ಚಾಮರಾಜನಗರ: ಕೇರಳದಲ್ಲಿ ಹಂದಿ ಜ್ವರ ಪ್ರಕರಣ ಹೆಚ್ಚಾಗುತ್ತಿವೆ. ಇದರಿಂದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಆತಂಕ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೇರಳ ಗಡಿಯಲ್ಲಿ ಪಶು ಇಲಾಖೆ ಕಟ್ಟೆಚ್ಚರ ವಹಿಸಿದೆ. ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ತೀವ್ರ ನಿಗಾ ವಹಿಸಿದೆ. ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರತಿ ವಾಹನಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಕೇರಳದಲ್ಲಿ ಆಫ್ರಿಕನ್ ಸ್ಟೈನ್ ಫೀವರ್ (ಹಂದಿ ಜ್ವರ) ಉಲ್ಬಣಿಸಿದೆ. ಇದು ಕೊರೊನಾ ವೈರಸ್ನಂತೆ ಬೇಗ ಹರಡುವ ವೈರಲ್ ಫೀವರ್. ಸದ್ಯ ಕಾಡು ಹಂದಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಜ್ವರ ಹೆಚ್ಚಾಗಿ ಹಂದಿಗಳು ಸಾವನ್ನಪ್ಪುತ್ತಿದ್ದು, ಹಂದಿಗಳಿಂದ ಬೇರೆ ಕಾಡು ಪ್ರಾಣಿಗಳಿಗೂ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆ ಜ್ವರ ಹರಡದಂತೆ ಪಶು ಇಲಾಖೆ ಮುನ್ನಚ್ಚರಿಕೆ ಕ್ರಮ ವಹಿಸಿದೆ.
ಮೈಸೂರು ಗಡಿಯಲ್ಲಿ ಹೈ ಅಲರ್ಟ್:ಕೇರಳದಲ್ಲಿ ಆಫ್ರಿಕನ್ ಸ್ಟೈನ್ ಫೀವರ್ ಕಾಣಿಸಿಕೊಂಡ ಹಿನ್ನೆಲೆ ಇತ್ತೀಚೆಗೆ (ಆ.25) ತಹಶೀಲ್ದಾರ್ ಸಣ್ಣ ರಾಮಪ್ಪ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಟಿ ರವಿಕುಮಾರ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ ಬಿ ಪ್ರಸನ್ನ ಮತ್ತು ತಂಡ ಕೇರಳ ಮತ್ತು ಕರ್ನಾಟಕ ಗಡಿಭಾಗವಾದ ಬಾವಲಿ ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ:ಕೇರಳದಲ್ಲಿ ಹಂದಿಗಳಿಗೆ ಆಫ್ರಿಕನ್ ಸ್ಟೈನ್ ಫೀವರ್.. ಮೈಸೂರು ಗಡಿಯಲ್ಲಿ ಹೈ ಅಲರ್ಟ್