ಏರೋ ಇಂಡಿಯಾ 2023: ಜನಮನ ರಂಜಿಸಿದ ಸೂರ್ಯಕಿರಣ್ ವಿಮಾನಗಳ ಚಿತ್ತಾಕರ್ಷಕ ಪ್ರದರ್ಶನ......
ಏರೋ ಇಂಡಿಯಾ: ಜನಮನ ರಂಜಿಸಿದ ಸೂರ್ಯಕಿರಣ್ ಚಿತ್ತಾಕರ್ಷಕ ಪ್ರದರ್ಶನ - ETV bharat kannnada
ಬೆಂಗಳೂರು: ಸೋಮವಾರದಿಂದ ಯಲಹಂಕ ವಾಯುನೆಲೆಯಲ್ಲಿ ಅಂತಾರಾಷ್ಟ್ರೀಯ ಗಣ್ಯರು, ಪ್ರದರ್ಶಕರ ಮುಂದಷ್ಟೇ ಘರ್ಜಿಸಿದ್ದ ಲೋಹದ ಹಕ್ಕಿಗಳು ಇಂದು ಸಾರ್ವಜನಿಕರ ಮುಂದೆಯೂ ತಮ್ಮ ಶಕ್ತಿ ಸಾಮರ್ಥ್ಯ ತೋರಿಸಿದವು. ಏರೋ ಇಂಡಿಯಾದ ಕೊನೆಯ ಎರಡು ದಿನಗಳ ಕಾಲ ಸಾರ್ವಜನಿಕರಿಗೂ ವೀಕ್ಷಣೆಗೆ ಅವಕಾಶ ನೀಡಿರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಲೋಹದ ಹಕ್ಕಿಗಳು ತಮ್ಮ ಸಾಮರ್ಥ್ಯವನ್ನು ಇನ್ನಷ್ಟು ದೊಡ್ಡಮಟ್ಟದಲ್ಲಿ ಪ್ರದರ್ಶಿಸಿದವು.
ಇದನ್ನೂ ಓದಿ:ಏರೋ ಇಂಡಿಯಾದಲ್ಲಿ ಆ್ಯಂಟಿ ಡ್ರೋನ್ ಡಿವೈಸ್ಗಳದ್ದೇ ಮಾತು, ಚರ್ಚೆ