ಕರ್ನಾಟಕ

karnataka

ಲೋಹದ ಹಕ್ಕಿಗಳ ತಾಲೀಮು ಪ್ರದರ್ಶನ ವೀಕ್ಷಿಸಿ ಸಂಭ್ರಮಿಸಿದ ಸಾರ್ವಜನಿಕರು

ETV Bharat / videos

ಏರೋ ಇಂಡಿಯಾ 2023: ಲೋಹದ ಹಕ್ಕಿಗಳ ತಾಲೀಮು ಪ್ರದರ್ಶನ ವೀಕ್ಷಿಸಿ ಸಂಭ್ರಮಿಸಿದ ಸಾರ್ವಜನಿಕರು

By

Published : Feb 11, 2023, 10:57 PM IST

Updated : Feb 14, 2023, 11:34 AM IST

ಬೆಂಗಳೂರು: ನಗರದಲ್ಲಿ ಸೋಮವಾರದಿಂದ ಲೋಹದ ಹಕ್ಕಿಗಳ ಕಲರವ ಶುರುವಾಗಲಿದ್ದು, ಐದು ದಿನಗಳ ಏರೋ ಇಂಡಿಯಾ ಪ್ರದರ್ಶನದಲ್ಲಿ ಗಗನ ಹಕ್ಕಿಗಳ ಪ್ರದರ್ಶನಗಳು ಸಾರ್ವಜನಿಕರನ್ನು ಬೆರಗುಗೊಳಿಸಲಿದೆ. ಈ ಬಾರಿಯ ಏರ್ ಶೋಗೆ ವಿದೇಶದಿಂದ 109 ಸೇರಿದಂತೆ 807 ಪ್ರದರ್ಶಕರು ಭಾಗವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನದಲ್ಲಿ ಹಲವು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಪ್ರದರ್ಶನ ನೀಡಲಿವೆ.

ಆತ್ಮನಿರ್ಭರ ಭಾರತ್ ಪರಿಕಲ್ಪನೆಯ ವೈಮಾನಿಕ ಪ್ರದರ್ಶನ ಇಂದು ಬೆಳಗ್ಗೆ 9:30 ರಿಂದ 12 ಗಂಟೆಯವರೆಗೆ ಪೂರ್ವಸಿದ್ಧತಾ ವೈಮಾನಿಕ ಪ್ರದರ್ಶನ ಯಲಹಂಕದ ವಾಯುನೆಲೆಯಲ್ಲಿ ಮಾಡಲಾಯಿತು. ಬೆಳಗ್ಗೆಯಿಂದಲೇ ಬಿಸಿಲ ಝಳವಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ತಾಲೀಮು ಸೂರ್ಯಕಿರಣ್ ವಿಮಾನಗಳು, ತೇಜಸ್ ಯುದ್ಧ ವಿಮಾನ ಆಕಾಶದಲ್ಲಿ ಮೇಲ್ಮುಖ, ಕೆಳಮುಖವಾಗಿ ವೇಗವಾಗಿ ಸಾಗುತ್ತಿದ್ದರೆ, ವೈಮಾನಿಕ ಸ್ಥಳದಲ್ಲಿದ್ದವರು ಮೂಕವಿಸ್ಮಿತರಾದರು. 

ಸುಧಾರಿತ ಯುದ್ಧ ವಿಮಾನಕ್ಕೆ ಸಮರ್ಥ ಪೈಲೆಟ್​ಗಳನ್ನು ತಯಾರು ಮಾಡಲು ತರಬೇತಿ ನೀಡುವ ರಫಲ್ ಯುದ್ಧ ವಿಮಾನ ಪ್ರದರ್ಶನದ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಹಾರಿ ತನ್ನ ಚಮತ್ಕಾರವನ್ನು ತೋರಿದ್ದು ವಿಶೇಷವಾಗಿತ್ತು. ಪ್ರದರ್ಶನದಲ್ಲಿ ಸಾರಂಗ್ ಹೆಲಿಕಾಪ್ಟರಗಳು, ಹೆಚ್.ಎ.ಎಲ್ ನಿರ್ಮಿತ 15 ಹೆಲಿಕಾಪ್ಟರ್ ಯಲಹಂಕ ವಾಯುನೆಲೆಯಲ್ಲಿ ನಡೆಸಿದ ಹಾರಾಟ ನೋಡುಗರನ್ನು ಸೆಳೆಯಿತು.

ಇದನ್ನೂ ಓದಿ:ಏರ್ ಶೋ: ಯಲಹಂಕ ವಾಯುನೆಲೆಯಲ್ಲಿ ಉಕ್ಕಿನ ಹಕ್ಕಿಗಳ ತಾಲೀಮು- ವಿಡಿಯೋ

Last Updated : Feb 14, 2023, 11:34 AM IST

ABOUT THE AUTHOR

...view details