ನಟಿ ತಾರಾ ಫೇಸ್ ಬುಕ್ ಖಾತೆ ಹ್ಯಾಕ್: ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲು - ಹ್ಯಾಕ್
Published : Dec 21, 2023, 10:29 AM IST
ಬೆಂಗಳೂರು:ಸಾಮಾಜಿಕ ಜಾಲತಾಣಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂದು ನಟಿ ತಾರಾ ಅನುರಾಧ ಅವರು ಬನಶಂಕರಿ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಾದ Tharaanooradha ಹಾಗೂ tharaanooradha venu ಈ ಎರಡು ಅಕೌಂಟ್‌ಗಳನ್ನೂ ಬಳಸುತ್ತಿದ್ದು, ಪರಿಚಯಸ್ಥರೊಬ್ಬರು ಕರೆ ಮಾಡಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಬಂದಿದೆ ನೋಡಿ ಎಂದು ತಿಳಿಸಿದರು.
ಆದರೆ, ಆ ಪೋಸ್ಟ್‌ಗೂ ನನಗೂ ಯಾವುದೇ ಸಂಬಂಧವಿಲ್ಲ, ಪೋಸ್ಟನ್ನು ನಾನು ಹಾಕಲಿಲ್ಲ. ಯಾರೂ ಕೂಡ ಇದನ್ನು ನಂಬಬೇಡಿ. ಇದರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇನೆ. ಅಲ್ಲದೇ, ನಾನು ನನ್ನ ಫೇಸ್‌ಬುಕ್ ಖಾತೆಯನ್ನು ತೆರೆದಾಗ ಪೋಸ್ಟ್ ಕಾಣಿಸಿಲ್ಲ. ಈ ಖಾತೆಗೆ ಬ್ಲೂ ಟಿಕ್ ಇದೆ. ಆದರೂ ನನ್ನ ಅಕೌಂಟನ್ನು ಬಳಸಿ ನಕಲಿ ಪೋಸ್ಟ್ ಹಾಕಿದ್ದಾರೆ. ಕೂಡಲೇ ಅದನ್ನು ಡಿಲೀಟ್ ಮಾಡಿಸಿ ಕೊಡಬೇಕು ಎಂದು ನಟಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇಂತಹ ಕೃತ್ಯಗಳನ್ನು ಮಾಡುವುದು ಅಪರಾಧ. ಈ ರೀತಿಯ ಅಪರಾಧಗಳು ಕಂಡುಬಂದರೆ ಅಂತಹವರಿಗೆ ಶಿಕ್ಷೆ ವಿಧಿಸಬೇಕೆಂದು ಎಂದು ವಿಡಿಯೋ ಮಾಡಿ ನಟಿ ತಾರಾ ತಿಳಿಸಿದ್ದಾರೆ.
ಇದನ್ನೂ ಓದಿ:ದುನಿಯಾ ವಿಜಿ ಬಂಧಿಸಿದ ಖಾಕಿ ಪಡೆ..! ಇದು 'ಭೀಮ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ