ಸ್ಯಾಂಡಲ್ವುಡ್ಗೆ ಥ್ಯಾಂಕ್ಸ್ ಹೇಳಿದ 'ಕಬ್ಜ' ಸಿನಿಮಾ ನಟಿ ಶ್ರೀಯಾ ಶರಣ್
ಚಿಕ್ಕಬಳ್ಳಾಪುರ:ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ನೆಹರು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಈ ವೇಳೆ ನಟಿ ಶ್ರೀಯಾ ಶರಣ್ ಮಾತನಾಡಿ, "ನನಗೆ 'ಕಬ್ಜ' ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಅದಕ್ಕಾಗಿ ನಾನು ಕನ್ನಡ ಚಿತ್ರರಂಗಕ್ಕೆ ತುಂಬು ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ. ಇನ್ನು ಉಪ್ಪಿ ಸರ್ ನೀವೊಬ್ಬ ಅದ್ಭುತ ನಟ. ನಿಮ್ಮ ಜೊತೆ ಸಿನಿಮಾದಲ್ಲಿ ಅಭಿನಯಿಸಿರುವುದು ನಿಜಕ್ಕೂ ಖುಷಿ ತಂದುಕೊಟ್ಟಿದೆ. ಎಲ್ಲಾ ಕನ್ನಡಿಗರನ್ನು ನಾನು ಪ್ರೀತಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ:'ನಾಟು ನಾಟು' ಹಾಡಿಗೆ ಕೊರಿಯನ್ಸ್ ಸಖತ್ ಸ್ಟೆಪ್: ವಿಡಿಯೋ ಹಂಚಿಕೊಂಡ ಪಿಎಂ ಮೋದಿ