ನಟಿ ಶಿಲ್ಪಾ ಶೆಟ್ಟಿ ದಂಪತಿಯಿಂದ ಬಾಂಗ್ಲಾಮುಖಿ ದೇವಸ್ಥಾನದಲ್ಲಿ ಯಾಗ - ವಿಡಿಯೋ - ಬಾಂಗ್ಲಾಮುಖಿ ದೇವಸ್ಥಾನ
Published : Sep 1, 2023, 12:03 PM IST
|Updated : Sep 1, 2023, 12:26 PM IST
ಆಗ್ರಾ(ಉತ್ತರಪ್ರದೇಶ): ಮಂಗಳೂರಿನ ಮಗಳು, ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ನಿನ್ನೆ ಗುರುವಾರ ಆಗ್ರಾದ ಬಾಂಗ್ಲಾಮುಖಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಾಲಯದಲ್ಲಿ ವಿಶೇಷ ಯಾಗ ಮಾಡಿದ್ದಾರೆ. ದಂಪತಿಗಳು ದೇವರ ದರ್ಶನ ಮಾಡುತ್ತಿರುವುದು ಮತ್ತು ಯಾಗ ಮಾಡುತ್ತಿರುವ ಫೋಟೋ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶಿಲ್ಪಾ ಶೆಟ್ಟಿ ನಗರದಲ್ಲಿ ಆಯೋಜಿಸಿದ್ದ ಒಂದು ಫ್ಯಾಷನ್ ಶೋನಲ್ಲಿ ಭಾಗವಹಿಸಲು ಬಂದಿದ್ದರು. ಈ ವೇಳೆ ತಮ್ಮ ಪತಿಯೊಂದಿಗೆ ನಟಿ ಗುರುವಾರ ಸಂಜೆ ಆಗ್ರಾ ಕ್ಯಾಂಟ್ನಲ್ಲಿರುವ ಬಾಂಗ್ಲಾಮುಖಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಯಾಗ ಮಾಡಿದ್ದಾರೆ. ಈ ವಿಚಾರದ ಕುರಿತು ಯಾರಿಗೂ ಮಾಹಿತಿ ಇರಲಿಲ್ಲ. ಗುಟ್ಟಾಗಿ ಬಂದು ಗುಟ್ಟಾಗಿಯೇ ಪೂಜೆ ಪುನಸ್ಕಾರ ನೆರೆವೇರಿಸಿ ತೆರಳಿದ್ದಾರೆ. ಆದರೆ, ಅಭಿಮಾನಿಗಳಿಗೆ ಇಲ್ಲಿ ಕ್ಲಿಕ್ಕಿಸಲಾದ ದಂಪತಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರವೇ ಮಾಹಿತಿ ಹೊರ ಬಿದ್ದಿದೆ.
ಇನ್ನು ಯಾಗವನ್ನು ನಡೆಸಿದ ಬಾಂಗ್ಲಾಮುಖಿ ದೇವಸ್ಥಾನದ ಮಹಂತ್ ನಿತಿನ್ ಸೇಥಿ ಮಾತನಾಡಿ, ದಂಪತಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ದೇವಾಲಯದಲ್ಲಿ ಯಾಗವನ್ನು ನಡೆಸಿದರು. ದೇವರ ದರ್ಶನದ ಪಡೆದ ಜೋಡಿ ಪುನೀತರಾದರು. ಶಿಲ್ಪಾ ಮತ್ತು ಪತಿ ರಾಜ್ ಕುಂದ್ರಾ ಧಾರ್ಮಿಕ ವಿಧಿವಿಧಾನಗಳ ಪೂಜೆಗಾಗಿ ಸಂಪೂರ್ಣ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಪೂಜೆ ಸಲ್ಲಿಸಿದರು. ಯಾಗ ಸಂಪೂರ್ಣಗೊಂಡ ನಂತರ ಇಬ್ಬರು ಹೋಟೆಲ್ಗೆ ಮರಳಿದ್ದಾರೆ. ಅವರು ಫ್ಯಾಶನ್ ಶೋವೊಂದರಲ್ಲಿ ಭಾಗವಹಿಸಲು ಆಗ್ರಾಕ್ಕೆ ಆಗಮಿಸಿದ್ದರು ಎಂದು ತಿಳಿಸಿದರು.
ಇದಕ್ಕೂ ಮೊದಲು 2009 ಮತ್ತು 2017 ರಲ್ಲೂ ನಟಿ ಶಿಲ್ಪಾ ಶೆಟ್ಟಿ ತಾಜ್ ನಗರಿಗೆ ಬಂದಿದ್ದರು. ಬಳಿಕ ಅವರು ಸ್ನೇಹಿತರೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಿದ್ದರು. ನಟಿ ಶಿಲ್ಪಾ ಶೆಟ್ಟಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಸೀಸನ್ 10 ರಲ್ಲಿ ತೀರ್ಪುಗಾರರಾಗಿದ್ದಾರೆ. ಇನ್ನು 2022ರಲ್ಲಿ ಶಿಲ್ಪಾ ಶೆಟ್ಟಿ ನಿಕಮ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:ಅಮಿತಾಭ್ ಬಚ್ಚನ್ ನಿವಾಸಕ್ಕೆ ಮಮತಾ ಬ್ಯಾನರ್ಜಿ ಭೇಟಿ; 'ಬಿಗ್ ಬಿ ಭಾರತ ರತ್ನ'ವೆಂದ ಸಿಎಂ