ಸಿನಿಮಾ ಟೈಟಲ್ ಅನೌನ್ಸ್: ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಯಶ್ ಫ್ಯಾನ್ಸ್ - TOXIC
Published : Dec 8, 2023, 10:29 PM IST
ಶಿವಮೊಗ್ಗ:ನಟ ಯಶ್ ಅವರ ನೂತನ ಸಿನಿಮಾದ ಟೈಟಲ್ ಘೋಷಣೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗದ ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿನೋಬನಗರದ ಶಿವಾಲಯದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಮಾಡಿಸಿ, ಸಿನಿಮಾದ ಟೈಟಲ್‌ನಂತೆ ಚಿತ್ರವೂ ಸಹ ವಿಶೇಷವಾಗಿ ಮೂಡಿಬಂದು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಪೂಜೆ ನೆರವೇರಿಸಿದ ಅಭಿಮಾನಿಗಳು ದೇವಾಲಯದ ಹೊರಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ನೂತನ ಚಿತ್ರದ ಟೈಟಲ್ 'ಟಾಕ್ಸಿಕ್' ಪೋಸ್ಟರ್ ಪ್ರದರ್ಶಿಸಿ ಸಂತಸ ವ್ಯಕ್ತಪಡಿಸಿದರು.
ಕೆಜಿಎಫ್ 2 ಸಿನಿಮಾ ಬಂದು ಒಂದೂವರೆ ವರ್ಷ ಕಳೆದರೂ ನಟನ ಮುಂದಿನ ಸಿನಿಮಾ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಮೂರ್ನಾಲ್ಕು ದಿನಗಳ ಹಿಂದಷ್ಟೇ ತಮ್ಮ ಮುಂದಿನ ಸಿನಿಮಾ ಘೋಷಿಸುವುದಾಗಿ ಸ್ವತಃ ಕೆಜಿಎಫ್ ಸ್ಟಾರ್ ಯಶ್ ಘೋಷಿಸಿದ್ದರು. ಕೊಟ್ಟ ಮಾತಿನಂತೆ ಇಂದು ಬಹುನಿರೀಕ್ಷಿತ 'Yash19' ಪ್ರಾಜೆಕ್ಟ್ ಘೋಷಣೆ ಆಗಿದೆ. ಯಶ್ ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಜೊತೆ ಕೈ ಜೋಡಿಸಿದ್ದು, ಇಂದು 'TOXIC' ಎಂಬ ಸಿನಿಮಾದ ಶೀರ್ಷಿಕೆ ಘೋಷಣೆಯಾಗಿದೆ.
ಇದನ್ನೂ ಓದಿ:ಹೊಸ ಪ್ರತಿಭೆಗಳ 'ಬ್ಯಾಕ್ ಬೆಂಚರ್ಸ್' ಸಿನಿಮಾಗೆ ಸಿಕ್ತು ಎ.ಆರ್.ರೆಹಮಾನ್ ಸಾಥ್