ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸುವುದು ಅಪಾಯಕಾರಿ, ನಾನಿದನ್ನು ಬೆಂಬಲಿಸುವುದಿಲ್ಲ: ಸಲ್ಮಾನ್ ಖಾನ್ - ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸುವುದು
Published : Nov 24, 2023, 8:47 AM IST
'ಟೈಗರ್ 3' ಸಿನಿಮಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆ ಮಾಡುತ್ತಿದೆ. ಕತ್ರಿನಾ ಕೈಫ್ ಜೊತೆಗಿನ ಸಲ್ಮಾನ್ ಖಾನ್ ರೊಮ್ಯಾನ್ಸ್ ಮತ್ತು ಚಿತ್ರದಲ್ಲಿ ಇಮ್ರಾನ್ ಜೊತೆಗಿನ ಘರ್ಷಣೆಯನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಗೆ ಕಿವಿಮಾತು ಹೇಳಿರುವ ಸಲ್ಮಾನ್ ಖಾನ್, ಥಿಯೇಟರ್‌ಗಳೊಳಗೆ ಪಟಾಕಿ ಸಿಡಿಸಬೇಡಿ ಮತ್ತು ನನ್ನ ಪೋಸ್ಟರ್‌ಗಳಿಗೆ ಹಾಲು ಸುರಿಯಬೇಡಿ ಎಂದು ಕೇಳಿಕೊಂಡಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ ಮಾಲೆಗಾಂವ್‌ನ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಿನಿಮಾ ವೀಕ್ಷಿಸುತ್ತಿರುವಾಗ ಪಟಾಕಿಗಳನ್ನು ಸಿಡಿಸಿದ್ದರು. ಈ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿರುವ ನಟ, ಥಿಯೇಟರ್‌ನಲ್ಲಿ ಪಟಾಕಿಗಳನ್ನು ಸಿಡಿಸುವುದು ತುಂಬಾ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ, ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಕುರಿತು ಆತಂಕ ಹೊರಹಾಕಿದರು. ಹಾಗೆಯೇ, ಮತ್ತಷ್ಟು ಗಾಳಿಯ ಗುಣಮಟ್ಟ ಹದಗೆಡದಂತೆ ತಡೆಯಲು ಅಭಿಮಾನಿಗಳನ್ನು ಒತ್ತಾಯಿಸಿದರು.
ಇದೇ ವೇಳೆ ಅಭಿಮಾನಿಗಳು ತಮ್ಮ ಪೋಸ್ಟರ್‌ಗೆ ಹಾಲು ಸುರಿದ ಘಟನೆಯನ್ನು ಉಲ್ಲೇಖಿಸಿದ ಸಲ್ಮಾನ್, "ನಾನು ಹಾಲು ಕುಡಿದರೆ ನನ್ನ ಹೊಟ್ಟೆಯೊಳಗೆ ಹೋಗುತ್ತದೆ, ನನ್ನ ಪೋಸ್ಟರ್‌ಗಳಿಗೆ ಹಾಲು ಸುರಿಯುತ್ತಿದ್ದರೆ ಅದು ಹಾಳಾಗುತ್ತವೆ. ಹಾಗಾಗಿ, ಈ ಅಭ್ಯಾಸವನ್ನು ನಿಲ್ಲಿಸಿ" ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿದರು.
ಇದನ್ನೂ ಓದಿ:ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸಿ ಅವಾಂತರ ; ಅತಿರೇಕದ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಕಿವಿ ಮಾತು