ಕರ್ನಾಟಕ

karnataka

ಕೋಲಾರದ ಗಣೇಶೋತ್ಸವಕ್ಕೆ ಬಂದ ನಟ ಧ್ರುವ ಸರ್ಜಾ: ವಿಡಿಯೋ

ETV Bharat / videos

ಕೋಲಾರದ ಗಣೇಶೋತ್ಸವಕ್ಕೆ ಬಂದ ನಟ ಧ್ರುವ ಸರ್ಜಾ.. ಅಭಿಮಾನಿಗಳ ಹರ್ಷೋದ್ಗಾರ - ವಿಡಿಯೋ - etv bharat kannada

By ETV Bharat Karnataka Team

Published : Sep 20, 2023, 8:59 PM IST

ಕೋಲಾರ:ನಗರದಲ್ಲಿಬಜರಂಗದಳದ ಲೋಕಮಾನ್ಯ ತಿಲಕ ಗಣೇಶ ನಿಮಜ್ಜನ ಸಮಿತಿ ಆಯೋಜನೆ ಮಾಡಿದ್ದ ಗಣೇಶೋತ್ಸವದಲ್ಲಿ ನಟ ಧ್ರುವ ಸರ್ಜಾ ಭಾಗವಹಿಸಿದರು. ಧ್ರುವ ಸರ್ಜಾ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನಗರದ ಎಂಜಿ ರಸ್ತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಟ ಧ್ರುವ ಕಾರಿಗೆ ಅಡ್ಡಬಂದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. 

ವೇದಿಕೆಗೆ ಆಗಮಿಸಿದ ಅವರು ಗಣೇಶ ಹಬ್ಬದ ಶುಭಾಶಯವನ್ನು ತಿಳಿಸಿ, ಸಿನಿಮಾದ ಡೈಲಾಗ್​ ಹೇಳಿ ಅಭಿಮಾನಿಗಳನ್ನು ರಂಜಿಸಿದರು. ಇದೇ ವೇಳೆ ಕಾವೇರಿ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಚಿತ್ರರಂಗದವರು ಯಾರು ಬರುತ್ತಿಲ್ಲ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ಕೋಲಾರದಲ್ಲಿ ಗಣೇಶ ಹಬ್ಬವನ್ನು ಚೆನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಅದಕ್ಕಾಗಿ ಇಂದು ಗಣೇಶ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಿದ್ದೇನೆ. ದೇವರ ಆಶೀರ್ವಾದ ಪಡೆದು ತೆರಳುತ್ತಿದ್ದೇನೆ ಎಂದು ತಮ್ಮ ಅಭಿಮಾನಿಗಳಿಗೆ ಕಾರಿನಿಂದಲೇ ಧನ್ಯವಾದವನ್ನು ತಿಳಿಸಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಇದನ್ನೂ ಓದಿ:'ಫುಲ್ ಮೀಲ್ಸ್‌' ಚಿತ್ರತಂಡದಿಂದ ತೇಜಸ್ವಿನಿ ಶರ್ಮಾಗೆ ಸಿಕ್ತು ಸ್ಪೆಷಲ್ ಗಿಫ್ಟ್ - ಸ್ಪೆಷಲ್​ ವಿಡಿಯೋ ಅನಾವರಣ

ABOUT THE AUTHOR

...view details