ಕರ್ನಾಟಕ

karnataka

ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಲಿವ್​ ಇನ್​​​​​​​ ರಿಲೇಷನ್​​ಶಿಪ್​​ನಲ್ಲಿದ್ದ​ ಗೆಳತಿ ಹತ್ಯೆ ಮಾಡಿದ್ದ ಆರೋಪಿ ಬಂಧನ.

ETV Bharat / videos

ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಲಿವ್​ ಇನ್​​​​​​​ ರಿಲೇಷನ್​​ಶಿಪ್​​ನಲ್ಲಿದ್ದ​ ಗೆಳತಿ ಹತ್ಯೆ ಮಾಡಿದ್ದ ಆರೋಪಿ ಬಂಧನ.. - etv bharat karnataka

By

Published : Feb 15, 2023, 3:38 PM IST

ಬೆಂಗಳೂರು: ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಲಿವ್​- ಇನ್​ ರಿಲೇಷನ್​ಶಿಪ್​​​​ನಲ್ಲಿದ್ದ​ ಗೆಳತಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸಲಾಗಿದೆ.
ಮಂಡ್ಯ ಮೂಲದ ಕೌಸರ್ ಮುಬೀನಾ ಅವರನ್ನು ಹತ್ಯೆ ಮಾಡಿದ ಆರೋಪದಡಿ ಲಿವಿಂಗ್ ಟೂ ರಿಲೇಷನ್‌ ನಲ್ಲಿದ್ದ ನದೀಂ ಪಾಷ ಅವರನ್ನು ಬಂಧಿಸಲಾಗಿದೆ. ಕೌಸರ್ ಹಾಗೂ ನದೀಂಪಾಷ ಇಬ್ಬರೂ ಈ ಹಿಂದೆ ಪ್ರತ್ಯೇಕವಾಗಿದ್ದು, ದಾಂಪತ್ಯದಿಂದ ದೂರವಾಗಿದ್ದರು. ದೂರದ ಸಂಬಂಧಿಕರಾಗಿದ್ದ ಕೌಸರ್ ನೊಂದಿಗೆ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿ ಕಳೆದೊಂದು ವರ್ಷದಿಂದ ನದೀಂ ಆಕೆಯ ಜೊತೆಯಲ್ಲಿ ವಾಸವಾಗಿದ್ದ. 

ಅಶೋಕನಗರದ ನಂಜಪ್ಪ ಸರ್ಕಲ್​ನಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಕೌಸರ್ ಬರ್ತ್ ಡೇ‌ ಇದ್ದಿದ್ದರಿಂದ ಒಟ್ಟಿಗೆ ಹೊರಗೆ ಹೋಗಿ ಊಟ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದರು. ಮೆಕ್ಯಾನಿಕ್ ಕೆಲಸ‌ ಮುಗಿಸಿಕೊಂಡು ಮನೆಗೆ ಬರುವಾಗ ಕೌಸರ್​ಗೆ ಬರ್ತ್ ಡೇ ಸಲುವಾಗಿ ಗಿಫ್ಟ್ ಕೊಟ್ಟು ವಿಶ್ ಮಾಡಿದ್ದ. ಬೆಳ್ಳಿ ಚೈನ್ ಗಿಫ್ಟ್ ಪಡೆದ ಕೌಸರ್, ಚಿನ್ನದ ಸರ ಕೊಡಬೇಕಿತ್ತು ಎಂದಿದ್ದಾಳೆ.‌ ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿ ಗಲಾಟೆಗೆ ಕಾರಣವಾಗಿತ್ತು. ಕಳೆದ ಸೋಮವಾರ ಮನೆಗೆ ಬಂದಿದ್ದಾಗ ಇಬ್ಬರ ನಡುವೆ ಮತ್ತೆ ಗಲಾಟೆ ತಾರಕಕ್ಕೇರಿದೆ‌‌‌. ಈ ವೇಳೆ, ಕೋಪದಿಂದ ಮನೆಯಲ್ಲಿದ್ದ ಚಾಕು ಹಿಡಿದು ಆಕೆ ಕುತ್ತಿಗೆ ಸೀಳಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬಳೆ, ಬಟ್ಟೆ ಬಾಕ್ಸ್​ನಲ್ಲಿ ಡ್ರಗ್ಸ್​ ಸಾಗಣೆ; ಅಂತಾರಾಷ್ಟ್ರೀಯ ಪೆಡ್ಲರ್​ಗಳ ಬಂಧನ

ABOUT THE AUTHOR

...view details