ಕರ್ನಾಟಕ

karnataka

ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ETV Bharat / videos

ಡೆಲಿವರಿ ಬಾಯ್ ಸೋಗಿನಲ್ಲಿ ಮಾದಕ ವಸ್ತು ಮಾರಾಟ: 11 ಮಂದಿ ಬಂಧನ - ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

By

Published : Feb 9, 2023, 9:31 PM IST

Updated : Feb 14, 2023, 11:34 AM IST

ಬೆಂಗಳೂರು : ಡೆಲಿವರಿ ಹುಡುಗರ ಸೋಗಿನಲ್ಲಿ ನಗರದಲ್ಲಿ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ 11 ಮಂದಿ ದಂಧೆಕೋರರನ್ನು ಸಿಸಿಬಿ ಪೊಲೀಸರು ಸೆರೆಹಿಡಿದಿದ್ದಾರೆ. ಕಿನ್ಯಾ ಹಾಗೂ ತಾಂಜೇನಿಯಾ ದೇಶದ ಟಿಬೇರಿಯಸ್ ನ್ಯಾಕುಂಡಿ, ಕೆರ್ರಿ ಸಾರಾ, ಕೇರಳದ ಸಚಿನ್, ರಾಗೇಶ್, ಸಾಹುಲ್, ಪ್ರಶಾಂತ್, ಸಿದ್ಧಾಂತ್ ಬಂಧಿತರು. ಇವರು ಮಡಿವಾಳ, ಬಾಣಸವಾಡಿ, ಸುದ್ದಗುಂಟೆಪಾಳ್ಯ, ಕೆ.ಆರ್.​​ಪುರಂ, ಬಂಡೇಪಾಳ್ಯ ವ್ಯಾಪ್ತಿಯಲ್ಲಿ ಅಕ್ರಮ ಮಾರಾಟದಲ್ಲಿ ತೊಡಗಿದ್ದರು.

ಇಬ್ಬರು ವಿದೇಶಿ ಆರೋಪಿಗಳು ವಿದ್ಯಾರ್ಥಿ ವೀಸಾದಡಿಯಲ್ಲಿ ನಗರಕ್ಕೆ ಬಂದು ಆಫ್ರಿಕಾ ಮೂಲದ‌ ಪ್ರಜೆಗಳಿಂದ ಕಡಿಮೆ ಬೆಲೆಗೆ ಡ್ರಗ್​ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇನ್ನುಳಿದ ಆರೋಪಿಗಳು ಪರಿಚಯಸ್ಥ ಗಿರಾಕಿಗಳು, ಐಟಿ-ಬಿಟಿ ಉದ್ಯೋಗಿಗಳು ಹಾಗು ವಿದ್ಯಾರ್ಥಿಗಳಿಗೆ ಆನ್​ಲೈನ್​​ ಮೂಲಕ ಮಾರಾಟ ಮಾಡುತ್ತಿದ್ದರು‌. 1 ಕೋಟಿ 35‌ ಲಕ್ಷ ರೂ ಮೌಲ್ಯದ ಗಾಂಜಾ, ಎಂಡಿಎಂಎ, ಪಿಲ್ಸ್ , ಸೇರಿದಂತೆ ಒಟ್ಟು 900 ಗ್ರಾಂ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದೇ ವೇಳೆ, ಪೊಲೀಸರ ಮೇಲೆ ಸುಳ್ಳು ಆರೋಪ ಮಾಡಿದರೆ ಅನಿವಾರ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಶಿಗ್ಗಾಂವಿ: ಸಿಸಿಟಿವಿ ಕ್ಯಾಮರಾಗೆ ಬಟ್ಟೆ ಹಾಕಿ ಚಿನ್ನದಂಗಡಿ ದೋಚಿದ ಕಳ್ಳರು

Last Updated : Feb 14, 2023, 11:34 AM IST

ABOUT THE AUTHOR

...view details